ನಿರೂಪಕಿ ಅಪರ್ಣಾ ಬಾಲ್ಯ ಹೇಗಿತ್ತು ಗೊತ್ತಾ ? ನಟಿಯ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು ಇಲ್ಲಿವೆ..

ಖ್ಯಾತ ನಿರೂಪಕಿ ಅಪರ್ಣಾ ಇನ್ನೂ ನೆನಪು ಮಾತ್ರ!
ಅಪರ್ಣಾ2 ವರ್ಷದ  ಸಾವು-ಬದುಕಿನ ಹೋರಾಟ
ನಿರರ್ಗಳವಾಗಿ ಮಾತನಾಡುತ್ತಿದ್ದ ಪದಗಳ ಖಜಾನೆ

Share this Video
  • FB
  • Linkdin
  • Whatsapp

2013ರಲ್ಲಿ ಕನ್ನಡದಲ್ಲಿ ಶುರುವಾದ ಬಿಗ್‌ಬಾಸ್‌ ಕಾರ್ಯಕ್ರಮದ (Bigg Boss programme) ಮೊದಲ ಸೀಸನ್‌ನಲ್ಲಿ ಅಪರ್ಣಾ (Aparna) ಸ್ಪರ್ಧಿಯಾಗಿ ಭಾಗವಹಿಸಿದ್ರು. ಇದಾದ ಬಳಿಕ 2015ರಲ್ಲಿ ಆರಂಭವಾದ ಸೃಜನ್ ಲೋಕೇಶ್ ಅವರ ‘ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ಅಪರ್ಣಾ ಅವರು ತಮ್ಮ ವ್ಯಕ್ತಿತ್ವಕ್ಕೆ ತದ್ವಿರುದ್ಧ ಪಾತ್ರ, ಒನ್ ಅಂಡ್ ಓನ್ಲಿ ವರಲಕ್ಷ್ಮೀಯಾಗಿ ಕಾಣಿಸಿಕೊಂಡು ಕನ್ನಡಿಗರ ಮನ ಗೆದ್ದಿದ್ದರು. ಅಪರ್ಣಾರ ವೈಯಕ್ತಿಕ ಬದುಕು ಅದೆಷ್ಟೇ ಬಿರುಗಾಳಿಯ ಹೊಡೆತಕ್ಕೆ ಸಿಕ್ಕರೂ ದೃಢವಾಗಿ ನಿಂತಿದ್ದರು. ಯಾವಾಗ ವೈದ್ಯರ ಬಳಿ ಹೋದರೋ ಆಗಲೇ ಗೊತ್ತಾಗಿದ್ದು ಇದು ಶ್ವಾಸಕೋಶ ಕ್ಯಾನ್ಸರ್(Lung cancer) ಅದು 4 ನೇ ಸ್ಟೇಜ್ ಎಂದು. ಇನ್ನು ಆರು ತಿಂಗಳಷ್ಟೆ ಬದುಕುತ್ತಾರೆಂದಿದ್ದರು ವೈದ್ಯರು ಆದರೆ ವೈದ್ಯರು ಕೊಟ್ಟಿದ್ದ ಗಡುವನ್ನೆ ಮೀರಿ 2 ವರ್ಷಗಳ ಕಾಲ ಬದುಕಿದರು ಅಪರ್ಣಾ. ಗಾಯಕಿ ಸುನಿತಾ ಮತ್ತು ಬಿಆರ್ ಛಾಯಾ ಅವರೊಟ್ಟಿಗೆ ಅಪರ್ಣಾ ಕಳೆದ ಕೊನೆಯ ದಿನಗಳ ಆ ನೆನಪುಗಳಿಗೆ ಸಾಕ್ಷಿಯಾಗಿದೆ ಈ ವಿಡಿಯೋ. ಅರುಳುಗಣ್ಣುಗಳ , ಜೋಗದ ಸಿರಿಯಂತೆ ಪದಗಳ ಪೋಣಿಸುತ್ತಾ ಮಾತನಾಡುತ್ತಿದ್ದ ನಮ್ಮನೆ ಮಗಳು ಅಪರ್ಣಾರನ್ನ ಹೀಗೆ ನೋಡುತ್ತಿದ್ದರೆ .. ಕರುಳು ಹಿಂಡಿದಂತಾಗುತ್ತದೆ. ಎರಡು ವರ್ಷದ ಹಿಂದೆ.. ಅಂದರೆ ಇದೇ ಜುಲೈನಲ್ಲಿ. ಶ್ವಾಸಕೋಶದ ಕ್ಯಾನ್ಸರ್ ಎಂದು ತಪಾಸಣೆಯಲ್ಲಿ ಗೊತ್ತಾಯಿತು. ಅದು ಆಗಲೇ ನಾಲ್ಕನೇ ಹಂತದಲ್ಲಿತ್ತು. ಮೊದಲು ನೋಡಿದ ವೈದ್ಯರು ಇನ್ನು ಆರು ತಿಂಗಳ ಇದ್ದರೆ ಹೆಚ್ಚು ಎಂದರು.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರಿಗೆ ಇಂದು ಸಾಲಬಾಧೆ ಕಾಡಲಿದ್ದು, ದೇಹಕ್ಕೆ ಪೆಟ್ಟುಬೀಳುವ ಸಾಧ್ಯತೆ ಇದೆ..

Related Video