ಮೇರುನಟಿ ಚಂದನವನದ ನಗುಮೊಗದ ಚೆಲುವೆ ಲೀಲಮ್ಮ! ದೇವರ ಗುಡಿ ಸೇರಿದ ಅಭಿನೇತ್ರಿ !

ಪ್ರಾಣಿ ಪಶು ಪಕ್ಷಿಗಳೆಂದರೆ ಬಹಳವಾಗಿ ಪ್ರೀತಿಸುತ್ತಿದ್ದವರು ಲೀಲಾವತಿ. ಕೊನೆ ಉಸಿರೆಳೆಯುವ ಮುನ್ನವಷ್ಟೆ ಪಶು ಆಸ್ಪತ್ರೆ ಕಟ್ಟಿಸಿ ಉದ್ಘಾಟನೆ ಮಾಡಿ ತನ್ನ ಕೊನೆಯ ಆಸೆ ಈಡೇರಿಸಿಕೊಂಡಿದ್ದರು.

Share this Video
  • FB
  • Linkdin
  • Whatsapp

ಚಂದನವನದ ನಗುಮೊಗದ ಚೆಲುವೆ, ಸ್ವಾಭಾಮಾನದ ನಲ್ಲೆ ಕನ್ನಡ ಚಿತ್ರರಂಗದ(Kannada film industry) ಶ್ರೇಷ್ಠ ಅಭಿನೇತ್ರಿ ಲೀಲಾವತಮ್ಮ ಇನ್ನಿಲ್ಲ. ನೆರೆ ಹೊರೆಯವರ ಮನೆಯಲ್ಲಿ ಮುಸುರೆ ಪಾತ್ರೆ ತೊಳೆದು ಬದುಕು ಕಟ್ಟಿಕೊಂಡ ಗಟ್ಟಿಗಿತ್ತಿ. ಜೀವನದುದ್ದಕ್ಕೂ ಮುಳ್ಳಿನ ಹಾದಿಯಲ್ಲೇ ನಡೆಯುತ್ತಾ ಮೇರು ನಟಿಯಾಗಿ ನಿರ್ಮಾಪಕಿಯಾಗಿ ಬೆಳೆದು ಹೂವಿನ ಮಾಲೆ ಹಾಕಿಸಿಕೊಂಡ ಸ್ವಾಭಿಮಾನದ ನಟಿ. ದಕ್ಷಿಣ ಭಾರತ ಚಲನಚಿತ್ರರಂಗದಲ್ಲಿ 600ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ಹಿರಿಯ ನಟಿ ಲೀಲಾವತಿ ಅವರಿಗೆ(Leelavathi) 85 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಕಳೆದ ಹಲವು ದಿನಗಳಿಂದ ಹಾಸಿಗೆ ಹಿಡಿದಿದ್ದರು. ತೀವ್ರ ಉಸಿರಾಟದ ತೊಂದರೆಯಿಂದಾಗಿ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು. ಲೀಲಾವತಿಯವರ ನಿಧನಕ್ಕೆ(Died) ಪ್ರಧಾನಿ ಮೋದಿಯವರಿಂದ ಹಿಡಿದು ಸಿಎಂ ಮಾಜಿ ಸಿಎಂ ಸೇರಿದಂತೆ ಸಿನಿಮಾ ರಾಜಕೀಯ ಎರಡೂ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ. ಲೀಲಾವತಿಯವರ ಏಕೈಕ ಪುತ್ರ ವಿನೋದ್ ರಾಜ್(Vinod Raj) ದುಖದ ಕಟ್ಟೆ ಒಡೆದಿದ್ದು. ಅವರನ್ನು ಈ ಸ್ಥಿತಿಯಲ್ಲಿ ನೋಡಲು ಎಂಥವರಿಗೂ ಕರುಳು ಚುರ್ ಎನ್ನುವಂತಿದೆ. ಇವರ ಬಾಂಧವ್ಯವನ್ನು ನೋಡಿ ತಾಯಿ ಮಗ ಅಂದ್ರೆ ಹೀಗಿರಬೇಕಪ್ಪಾ ಎಂದವರೆ ಹೆಚ್ಚು. ದೇವರ ಆಟ ಬಲ್ಲವರ್ಯಾರು . ವಿಧಿ ಬಹಳ ಕ್ರೂರಿ ಎನ್ನುವುದಷ್ಟೆ ಸತ್ಯ.

ಇದನ್ನೂ ವೀಕ್ಷಿಸಿ: ಮಗನನ್ನು ಅನಾಥನನ್ನಾಗಿಸಿ ಹೋದ ಲೀಲಾವತಿ ! ಮುದ್ದಿನ ಪುತ್ರನಿಗೆ ಕಲಿಸಿದ್ದು ಅದೆಂಥಾ ಸಂಸ್ಕಾರ..?

Related Video