ಬಾರದ ಲೋಕಕ್ಕೆ ಪಯಣ ಬೆಳೆಸಿದ ಅಪರ್ಣಾ..ಬಾಳ ನಿರೂಪಣೆ ಮುಗಿಸಿ ಚಿರ ನಿದ್ರೆಗೆ ಜಾರಿದ ನಟಿ

‘ಜೀವನವೇ ಒಂದು ನಿತ್ಯೋತ್ಸವ’ ಎಂದು ಹೇಳಿದ್ದ ಕನ್ನಡತಿ
 ನಿರೂಪಣೆ ಮೂಲಕ ಕನ್ನಡಿಗರ ಹೃದಯ ಗೆದ್ದ ನಟಿ ಅಪರ್ಣಾ
ಜೇನಿನಂತೆ ಕನ್ನಡ ಮಾತನಾಡುತ್ತಿದ್ದ ಅಪರ್ಣಾ ನೆನಪು ಮಾತ್ರ
 

First Published Jul 12, 2024, 5:18 PM IST | Last Updated Jul 12, 2024, 5:19 PM IST


ಕನ್ನಡ ನಾಡು ಕಂಡ ಅಪರೂಪದ ನಿರೂಪಕಿ ಅಪರ್ಣಾ(Anchor Aparna) ವಸ್ತಾರೆ. ಇವರ ಅಚ್ಚ ಅಷ್ಟೇ ಸ್ಪಷ್ಟ ಕನ್ನಡ ಕೇಳ್ತಿದ್ರೆ, ಕನ್ನಡಿಗರಲ್ಲದವರೂ ಕೂಡ ಕನ್ನಡ ಭಾಷೆಗೆ ತಲೆದೂಗಿ ಬಿಡೋರು. ಕನ್ನಡ(Kannada) ಭಾಷೆ ನುಡಿದ್ರೆ, ಅಪರ್ಣಾರಂತೆ ನುಡಿಯಬೇಕು ಅನ್ನೊದು ಅದೆಷ್ಟೋ ಜನರ ಕನಸಾಗಿತ್ತು. ಹೀಗೆ ಎಷ್ಟೋ ಜನರ ನಡೆ ನುಡಿಯಲ್ಲಿ ಕನ್ನಡ ಬಿತ್ತಿದ ಅಪ್ಪಟ ಕನ್ನಡತಿ ಅಪರ್ಣಾ, ಈಗ ಇಹಲೋಕ ತ್ಯಜಿಸಿದ್ದಾರೆ. ಅಪರ್ಣಾ ಅವರ ಪಾರ್ಥಿವ ಶರೀರ ನೋಡುವುದಕ್ಕೆ ಬರುತ್ತಿರೋ ಅಭಿಮಾನಿಗಳ ಕಣ್ಣೀರೇ ಸಾಕ್ಷಿ, ಅವರು ಅಪರ್ಣಾ ಅವರಿಗೆ ಕೊಟ್ಟ ಸ್ಥಾನ ಎಂಥಹದ್ದು ಅನ್ನೊದು ಅರ್ಥವಾಗಿ ಬಿಡುತ್ತೆ. ಸಿನಿಮಾಗಳಲ್ಲಿ ಮನೋಜ್ಞ ಅಭಿನಯದಿಂದ ಹೃದಯ ಗೆದ್ದ ಅಪರ್ಣಾ ಅವರು, ಹಾಸ್ಯಪಾತ್ರಗಳಲ್ಲೂ ನಟಿಸಿ ಸೈ ಅನಿಸಕೊಂಡವರು. ಅಪರ್ಣಾ ಅವರನ್ನ ನೋಡಿದಾಗೆಲ್ಲ ಜನರಿಗೆ ಮೊದಲು ನೆನಪಾಗುತ್ತಿದ್ದಿದ್ದೇ, ಗಂಭೀರ ಪಾತ್ರಗಳು ಹಾಗೂ ನಿರರ್ಗಳವಾಗಿ ಮಾತನಾಡೋ ಕನ್ನಡ. ಆದರೆ ಅಪರ್ಣಾ ಅವರು ಹಾಸ್ಯ ಪಾತ್ರಗಳನ್ನೂ ಮಾಡಿ, ಎಲ್ಲರೂ ಹುಬ್ಬೇರಿಸುವ ಹಾಗೆ ಮಾಡಿದ್ದರು. ಅಪರ್ಣಾ ಅವರು ಹೀಗೆ ನಕ್ಕು ನಲಿಸೋ ಪಾತ್ರಗಳನ್ನ ನೋಡ್ತಿದ್ರೆ, ನಗು ಜೊತೆ ಜೊತೆಗೆ ಕಣ್ಣಾಲಿಗಳು ಕೂಡ ತುಂಬಿಕೊಂಡು ಬರುತ್ತೆ ಅಲ್ವಾ. ಕನ್ನಡ ಕಂಠ ಅಂತಾನೇ ಖ್ಯಾತಿ ಹೊಂದಿದ್ದ  ಅಪರ್ಣಾ ಇಂದು ನಮ್ಮ ಜೊತೆ ಇಲ್ಲ ನಿಜ. ಆದರೆ ಅದರೆ ಅವರ ದನಿ ನಮ್ಮ ದಿನನಿತ್ಯದ ಪಯಣದಲ್ಲಿ ಸಾಥ್ ಕೊಡುವ ಹಾಗೆ ಮಾಡಿದೆ ನಮ್ಮ ಮೆಟ್ರೋ. 

ಇದನ್ನೂ ವೀಕ್ಷಿಸಿ:  ನಮ್ಮ ಕುಟುಂಬಕ್ಕೆ ತುಂಬಾ ಆಪ್ತರಾಗಿದ್ದರು, ಕನ್ನಡದ ಮೇಲೆ ಅಪರ್ಣಾಗೆ ಅಪಾರ ಪ್ರೀತಿ ಇತ್ತು: ರಾಘವೇಂದ್ರ ರಾಜ್‌ಕುಮಾರ್‌