ನಮ್ಮ ಕುಟುಂಬಕ್ಕೆ ತುಂಬಾ ಆಪ್ತರಾಗಿದ್ದರು, ಕನ್ನಡದ ಮೇಲೆ ಅಪರ್ಣಾಗೆ ಅಪಾರ ಪ್ರೀತಿ ಇತ್ತು: ರಾಘವೇಂದ್ರ ರಾಜ್‌ಕುಮಾರ್‌

ಅಣ್ಣನ ಜೊತೆ ಇನ್‌ಸ್ಪೆಕ್ಟರ್ ವಿಕ್ರಮ್ ಸಿನಿಮಾದಲ್ಲಿ ನಟಿಸಿದ್ರು. ನಮ್ಮ ಕುಟುಂಬಕ್ಕೆ ತುಂಬಾ ಆಪ್ತರು ಆಗಿದ್ದರು ಎಂದು ರಾಘವೇಂದ್ರ ರಾಜ್‌ಕುಮಾರ್‌ ಹೇಳಿದರು.

Share this Video
  • FB
  • Linkdin
  • Whatsapp

ನಟ ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ನಿರೂಪಕಿ ಅಪರ್ಣಾ(Actress Aparna) ಅಂತಿಮ ದರ್ಶನವನ್ನು ಪಡೆದರು. ಜೊತೆಗೆ ನಟಿ ಲಕ್ಷ್ಮಿ ಗೋಪಾಲಸ್ವಾಮಿ ಸಹ ಅಂತಿಮ ದರ್ಶನ ಪಡೆದರು. ದರ್ಶನದ ಬಳಿಕ ರಾಘವೇಂದ್ರ ರಾಜ್‌ಕುಮಾರ್‌ ಮಾತನಾಡಿ, ಅಣ್ಣನ ಜೊತೆ ಇನ್‌ಸ್ಪೆಕ್ಟರ್ ವಿಕ್ರಮ್ ಸಿನಿಮಾದಲ್ಲಿ ನಟಿಸಿದ್ರು. ಅಪ್ಪು ಸಿನಿಮಾದ ಶತಕದಿನೋತ್ಸವ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ್ರು. ನಮ್ಮ ಕುಟುಂಬಕ್ಕೆ ತುಂಬಾ ಆಪ್ತರು ಆಗಿದ್ದರು. ನನ್ನ ಮಗ ವಿನಯ್ ನಟನೆಯ ಗ್ರಾಮಾಯಣ ಸಿನಿಮಾದಲ್ಲಿ ನಟಿಸ್ತಿದ್ರು. ನಾನೂ ಶೂಟಿಂಗ್ ಸೆಟ್‌ಗೆ ಹೋಗಿದ್ದೆ. ಕನ್ನಡದ ಮೇಲೆ ಅವರಿಗೆ ಅಪಾರ ಪ್ರೀತಿ ಇದೆ. ನಮಗೆ ಅಪರ್ಣಾ ಮೇಲೆ ಅಪಾರ ಗೌರವ ಇದೆ ಎಂದು ಹೇಳಿದರು. ಇನ್ನೂ ಅಪರ್ಣಾ ನಿಧನಕ್ಕೆ ಮಂಡ್ಯ ರಮೇಶ್ ಸಂತಾಪ ಸೂಚಿಸಿದ್ದಾರೆ.

ಇದನ್ನೂ ವೀಕ್ಷಿಸಿ: ನಿರೂಪಕಿ ಅಪರ್ಣಾ ನಿಧನಕ್ಕೆ ಸಿಎಂ, ಡಿಸಿಎಂ ಸಂತಾಪ: ಇವರ ನಿಧನ ಕಲಾ ಲೋಕಕ್ಕೆ ತುಂಬಲಾರದ ನಷ್ಟ-ಡಿಸಿಎಂ

Related Video