Asianet Suvarna News Asianet Suvarna News

ರಾಕಿ ಮೇಲೆ ಕಣ್ಣು ಹಾಕಿದ ಲೈಗರ್ ಬ್ಯೂಟಿ: ಯಶ್‌ ಜೊತೆ ಸಿನಿಮಾ ಮಾಡೋ ಆಸೆ ಎಂದ ಮಿಲ್ಕಿ ಅನನ್ಯಾ!

ರಾಕಿಂಗ್ ಸ್ಟಾರ್ ಯಶ್ ಜೊತೆ ನಟಿಸಬೇಕು ಅಂತ ನಟಿ ಅನನ್ಯಾ ಹೇಳಿದ್ದಾರೆ. ಅದು ಕೂಡ ಕನ್ನಡದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. 

ಕೆಜಿಎಫ್ ಕಿಂಗ್ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಅನೌನ್ಸ್ ಮಾಡ್ಲಿ ಅಂತ ಯಶ್ರ ಕೋಟಿ ಅಭಿಮಾನಿಗಳು ಕಾಯ್ತಿದ್ದಾರೆ. ರಾಕಿಗೂ ತನ್ನ ನೆಕ್ಸ್ಟ್ ಪ್ರಾಜೆಕ್ಟ್ ಅನೌನ್ಸ್ಮೆಂಟ್ನದ್ದೇ ಚಿಂತೆ ಹತ್ತಿದೆ. ಆದ್ರೆ ಬಾಲಿವುಡ್‌ನ ಹಾಟ್ ಬ್ಯೂಟಿಯರಿಗೆ ಮಾತ್ರ ಯಶ್ ಮೇಲಿನ ಪ್ರೀತಿಯ ಹುಚ್ಚು ಹೆಚ್ಚಾಗಿದೆ. ಯಾಕಂದ್ರೆ ಒಬ್ಬರ ಮೇಲೆ ಮತ್ತೊಬ್ಬರು ಪೈಪೋಟಿಗೆ ಬಿದ್ದಂತೆ ಬಿಟೌನ್ ನಟಿಯರು ಯಶ್ ಬಗ್ಗೆ ಮಾತನಾಡುತ್ತಿದ್ದಾರೆ. ಇದೀಗ ಆ ಲೀಸ್ಟ್‌ಗೆ ಲೈಗರ್ ಚೆಲುವೆ ಅನನ್ಯಾ ಪಾಂಡೆ ಕೂಡ ಎಂಟ್ರಿ ಕೊಟ್ಟಿದ್ದಾರೆ.  ಅವರು ಯಶ್‌ ಜೊತೆ ನನಗೆ ನಟಿಸುವ ಆಸೆ ಇದೆ ಎಂದು ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ: ಆದಿಪುರುಷ್‌ಗಿದ್ದ ಕಳಂಕ ಕಳಚಿದ ಫೈನಲ್ ಟ್ರೈಲರ್! : ಸ್ಟೇಜ್‌ಗೆ ಬಾಹುಬಲಿಯಂತೆ ಬಂದ ಪ್ರಭಾಸ್.!