Asianet Suvarna News Asianet Suvarna News

ಆದಿಪುರುಷ್‌ಗಿದ್ದ ಕಳಂಕ ಕಳಚಿದ ಫೈನಲ್ ಟ್ರೈಲರ್! : ಸ್ಟೇಜ್‌ಗೆ ಬಾಹುಬಲಿಯಂತೆ ಬಂದ ಪ್ರಭಾಸ್.!

ಆದಿಪುರುಷ್ ಪ್ರೀ ರಿಲೀಸ್ ಕಾರ್ಯಕ್ರಮ ಜಗಮಗ ಎಂದಿದೆ. ಒಂದ್ ಕಡೆ ರಾಮನ ಅವತಾರಿ ಪ್ರಭಾಸ್ ದೊಡ್ಡ ದೊಡ್ಡ ಕಟೌಟ್‌ಗಳು ಇಡೀ ತಿರುಪತಿ ತುಂಬ ಜಳಪಿಸಿವೆ. 
 

ನಿಮಗೆಲ್ಲಾ ರಾಮಾಯಣ ಕಥೆ ಗೊತ್ತು. ಪುರಾಣ ಪುಣ್ಯಕಥೆಯನ್ನ ಬೆಳ್ಳಿತೆರೆ ಮೇಲೆ ಈಗಾಗ್ಲೆ ನೋಡಿರ್ತೀರಾ. ಆದ್ರೆ ಅದೇ ರಾಮಾಯಣ ಸ್ಟೋರಿಯನ್ನ ವಿಭಿನ್ನವಾಗಿ, ಅಡ್ವಾನ್ಸ್ಡ್ ಗ್ರಾಫಿಕ್ಸ್ ವೈಭವದಲ್ಲಿ ನೋಡಿದ್ರೆ ಹೇಗಿರುತ್ತೆ ಅಲ್ವಾ.? ಅದೊಂಥರಾ ಕಣ್ಣಿಗೆ ಹಬ್ಬವೇ ಸರಿ ಈಗ ಅಂತದ್ದೊಂದು ಅವಕಾಶ ಪ್ರತಿಯೊಬ್ಬ ಸಿನಿ ಪ್ರೇಕ್ಷಕನಿಗೂ ಸಿಗ್ತಾ ಇದೆ. ಸೌತ್ ಸ್ಟಾರ್ ಹಾಗೂ ನಾರ್ತ್ ಟೆಕ್ನೀಷಿಯನ್ಸ್ ಸೇರಿ ರಾಮ ರಾವಣನ ಕಥೆಗೆ ಹೊಸ ಬಣ್ಣ ತುಂಬಿದ್ದಾರೆ. ಆ ಸಿನಿಮಾ ಆದಿಪುರುಷ್. ಇದೀಗ ಆದಿಪುರುಷ್ ಫೈನಲ್ ಟ್ರೈಲರ್ ರಿಲೀಸ್ ಆಗಿದೆ. ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ರಾಮ ರಾವಣ ಕಾಳಗದ ಪ್ರದರ್ಶನ ಆಗಿದೆ. ಆದಿಪುರುಷ್ ಸಿನಿಮಾ ಜೂನ್ 16ಕ್ಕೆ ವಿಶ್ವದಾದ್ಯಂತ ತೆರೆ ಕಾಣುತ್ತಿದೆ. ಆದಿಪುರುಷ್ಗೆ ತಿರುಪತಿ ತಿಮ್ಮಪ್ಪನ ಆಶೀರ್ವಾದವೂ ಸಿಕ್ಕಿದೆ. ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದ ದೊಡ್ಡ ಮೈದಾನದಲ್ಲಿ ಅತಿ ದೊಡ್ಡ ವೇದಿಕೆ ಹಾಕಿ ಅದ್ಧೂರಿಯಾಗಿ ಪ್ರೀ ರಿಲೀಸ್ ಇವೆಂಟ್ ಮಾಡಿದ್ದಾರೆ. 15 ಸಾವಿರಕ್ಕೂ ಅಧಿಕ ಪ್ರಭಾಸ್ ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಬಂದಿದ್ರು. ಆದಿಪುರುಷ್ ಪ್ರೀ ರಿಲೀಸ್ ಈ ಅದ್ಧೂರಿ ಕಾರ್ಯಕ್ರಮಕ್ಕೆ ಎರಡುವರೆ ಕೋಟಿ ಖರ್ಚು ಮಾಡಿದ್ದಾರಂತೆ. 

ಇದನ್ನೂ ವೀಕ್ಷಿಸಿ: ಅರಮನೆ ಮೈದಾನದಲ್ಲಿ ಅಭಿಷೇಕ್‌-ಅವಿವಾ ಅದ್ಧೂರಿ ಆರತಕ್ಷತೆ: ನಟ-ನಟಿಯರು, ರಾಜಕಾರಣಿಗಳಿಂದ ನವ ಜೋಡಿಗೆ ಶುಭಹಾರೈಕೆ