Amulya: 7 ವರ್ಷಗಳ ಬಳಿಕ ಮತ್ತೆ ಚಿತ್ರರಂಕ್ಕೆ ಅಮೂಲ್ಯ ಕಮ್‌ಬ್ಯಾಕ್..?

ಬಾಲನಟಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟು ನಾಯಕಿಯಾಗಿ ಬೆಳೆದು ದೊಡ್ಡ ಅಭಿಮಾನಿ ಬಳಗ ಹೊಂದಿದ್ದ ನಟಿ ಅಮೂಲ್ಯ. ಒಂದು ಕಾಲದಲ್ಲಿ ಅಮೂಲ್ಯರನ್ನು ಹುಚ್ಚರಂತೆ ಇಷ್ಟ ಪಡುವ ಅಭಿಮಾನಿ ಬಳಗ ಇತ್ತು. ಇಂತಹ ಅಭಿಮಾನಕ್ಕೆ ಕಾರಣ 'ಚೆಲುವಿನ ಚಿತ್ತಾರ' ಸಿನಿಮಾ.

Share this Video
  • FB
  • Linkdin
  • Whatsapp

ಅಮೂಲ್ಯ ಕನ್ನಡದಲ್ಲಿ ಹಲವು ಹಿಟ್ ಸಿನಿಮಾ ಕೊಟ್ಟಿದ್ದಾರೆ. ಆದ್ರೆ ಅಮೂಲ್ಯ ಜಗದೀಶ್(Amulya) ಜೊತೆ ಮದುವೆ ಆದ ನಂತರ ಚಿತ್ರರಂಗದಿಂದ ದೂರಾಗಿದ್ರು. ಇದೀಗ ಈ ಚಿತ್ತಾರದ ಬೆಡಗಿ ಮತ್ತೆ ಸ್ಯಾಂಡಲ್‌ವುಡ್‌ಗೆ(Sandalwood) ಎಂಟ್ರಿ ಕೊಡೋಕೆ ಸಜ್ಜಾಗಿದ್ದಾರೆ. 2017ರಲ್ಲಿ ಗಣೇಶ್ ನಟನೆಯ 'ಮುಗುಳು ನಗೆ' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಅಮೂಲ್ಯ ನಟಿಸಿದ್ರು. ಅದೇ ಅವರ ಕೊನೆಯ ಸಿನಿಮಾ. ಆ ನಂತರ ಸಾಂಸಾರ, ಮಕ್ಕಳು ಅಂತ ಬ್ಯುಸಿಯಾಗಿದ್ರು. ಈಗ ಏಳು ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ ಗೋಲ್ಡನ್ ಕ್ವೀನ್ ಅಮೂಲ್ಯ. ನಟಿ ಅಮೂಲ್ಯ ಯಾವ್ ಹೀರೋ ಜೊತೆ ನಾಯಕಿ ಆಗಿ ಕಮ್ ಬ್ಯಾಕ್ ಆಗ್ತಾರೆ ಗೊತ್ತಾ? ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್( Prajwal Devaraj) ಜೊತೆಗಂತೆ. ಪ್ರಜ್ವಲ್ ಗುರುದತ್ ಗಾಣಿಗ ನಿರ್ದೇಶಿಸುತ್ತಿರುವ 'ಕರಾವಳಿ' ಸಿನಿಮಾದಲ್ಲಿ(Karavali movie) ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ಅಮೂಲ್ಯ ಮತ್ತೆ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ವೀಕ್ಷಿಸಿ: ರಾಮನಾಗಿ ಮಹೇಶ್ ಬಾಬು, ಹನುಮಂತನಾಗಿ ಚಿರಂಜೀವಿ? ಇದು ‘ಜೈ ಹನುಮಾನ್’!

Related Video