ರಾಮನಾಗಿ ಮಹೇಶ್ ಬಾಬು, ಹನುಮಂತನಾಗಿ ಚಿರಂಜೀವಿ? ಇದು ‘ಜೈ ಹನುಮಾನ್’!

ಅಯೋಧ್ಯಾ ರಾಮನ ಪ್ರಾಣ ಪ್ರತಿಷ್ಟಾಪನೆ ನಂತರ ಸದ್ಯ ಸಿನಿದುನಿಯಾದಲ್ಲೂ ರಾಮನದ್ದೆ ಧ್ಯಾನ. ರಾಮ ಭಕ್ತ ಹನುಮಾನ್ ಸಿನಿಮಾ ಮಾಡಿದ್ರೂ ಜನ ಭಕ್ತಯಿಂದ ನೋಡಿ ಚಿತ್ರವನ್ನು ಗೆಲ್ಲಿಸಿದ್ರು. ಇದೀಗ ಈ ಸಿನಿಮಾದ ಸೀಕ್ವೆಲ್ ಜೈ ಹನುಮಾನ್ ಎನ್ನುವ ಮತ್ತೊಂದು ಸಿನಿಮಾ ಮಾಡಲು ಹೊರಟಿದ್ದಾರೆ ಟಾಲಿವುಡ್ ಸೂಪರ್‌ಗಳು.

Share this Video
  • FB
  • Linkdin
  • Whatsapp

ಬಿಗ್ ಬಜೆಟ್ ಚಿತ್ರ ಜೈ ಹನುಮಾನ್(Jai Hanuman movie) ರಾಮನಾಗಿ ಮಹೇಶ್‌ ಬಾಬು(Mahesh Babu), ಹನುಮಂತನಾಗಿ ಚಿರಂಜೀವಿ(Chiranjeevi) ನಟಿಸಲಿದ್ದಾರೆಂಬ ಸುದ್ದಿ ಇದೀಗ ಬಿಗ್ ಟಾಪಿಕ್ ಆಗಿದೆ.‘ಹನುಮಾನ್’ ಸಿನಿಮಾದಲ್ಲಿ ಇರುವುದು ಒಂದು ಸೂಪರ್ ಹೀರೋ ಕಥೆ. ಆಂಜನೇಯನ ಕೃಪೆಯಿಂದ ಸೂಪರ್ ಪವರ್ ಪಡೆಯುವ ಹಳ್ಳಿ ಹುಡುಗನ ಕಹಾನಿ ಈ ಸಿನಿಮಾದಲ್ಲಿ ಇದೆ. ಅದೇ ಕಥೆ ‘ಜೈ ಹನುಮಾನ್’ ಸಿನಿಮಾದಲ್ಲಿ ಮುಂದುವರಿಯಲಿದೆ. ಅದರಲ್ಲಿ ಶ್ರೀರಾಮ(Sri Rama) ಮತ್ತು ಆಂಜನೇಯನ ಪಾತ್ರಗಳು ಬರಲಿವೆ. ಆ ಪಾತ್ರಗಳನ್ನು ಯಾರು ಮಾಡಬೇಕು ಎಂಬುದರ ಬಗ್ಗೆ ನಿರ್ದೇಶಕ ಪ್ರಶಾಂತ್ ವರ್ಮಾ ಅವರು ಮಾತನಾಡಿದ್ದು ಮೆಗಾಸ್ಟಾರ್ ಚಿರಂಜೀವಿ ಹನುಮಂತನ ಪಾತ್ರವನ್ನೂ ರಾಮನಾಗಿ ಮಹೇಶ್ ಬಾಬು ನಟಿಸಿದರೆ ಅದ್ಭುತವಾಗಿರುತ್ತದೆ ಎಂದು ಆಸೆಪಟ್ಟಿದ್ದಾರೆ. ಇದಕ್ಕೆ ಚಿರು ಪ್ರಿನ್ ಒಪ್ಪುತ್ತಾರಾ ನೋಡಬೇಕು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಹನುಮಾನ್’ ಸಿನಿಮಾದಲ್ಲಿ ಸೂಪರ್ ಹೀರೋ ಪಾತ್ರ ಮಾಡಿದ ತೇಜ ಸಜ್ಜಾ ಅವರು ‘ಜೈ ಹನುಮಾನ್’ ಚಿತ್ರದ ಪ್ರಮುಖ ಪಾತ್ರದಲ್ಲಿ ಮುಂದುವರಿಯಲಿದ್ದಾರೆ. ಕೇವಲ 20 30 ಕೋಟಿಯಲ್ಲಿ ರೆಡಿಯಾದ ಹನುಮಾನ್ 200 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, ಇದೀ ಅದರ ಸೀಕ್ವೆಲ್ ಅತಿ ಹೆಚ್ಚು ಬಂಡವಾಳ ಹಾಕಿಯೇ ಸಿನಿಮಾ ಮಾಡೋ ಪ್ಲ್ಯಾನ್ ಚಿತ್ರತಂಡದ್ದು.ಇನ್ನು ಅದರ ಸೀಕ್ವೆಲ್ ಆಗಿರೋ ಜೈ ಹನುಮಾನ್ ಚಿತ್ರದಲ್ಲಿ ರಾಮ ಆಂಜನೇಯನ ಪಾತ್ರಗಳು ಪ್ರಮುಖವಾಗಿದ್ದುಇದಕ್ಕೆ ಸೂಪರ್ ಸ್ಟಾರ್ಗಳಿಬ್ಬರೂ ಗ್ರೀನ್ ಸಿಗ್ನಲ್ ಕೊಡ್ತಾರಾ? ಕಾದು ನೋಡಬೇಕಿದೆ. ಯಾಕಂದ್ರೆ ಮಹೇಶ್ ಬಾಬು ರಾಜ ಮೌಳಿ ಚಿತ್ರದಲ್ಲಿ ಬಿಜಿ, ಚಿರು ಅನೌನ್ಸ್ ಆಘಿರೋ 3 ಸಿನಿಮಾಗಳಲ್ಲಿ ಬಿಜಿ. ಈ ನಡುವೆ ಜೈ ಹನುಮಾನ್ಗೆ ಡೇಟ್ ಕೊಡ್ತಾರಾ..? ಕಾದು ನೋಡಬೇಕು.

ಇದನ್ನೂ ವೀಕ್ಷಿಸಿ: ನಟ ಸುದೀಪ್‌ಗೆ ಐರೆನ್ ಲೆಗ್ ಎಂದಿದ್ದ ಚಿತ್ರರಂಗ..! ಸೋತು ಗೆದ್ದು ಸೂಪರ್ ಹಿಟ್ ಚಿತ್ರಗಳನ್ನ ಕೊಟ್ಟ ಕಿಚ್ಚ.!

Related Video