
ಅಮೃತಾ ಪ್ರೇಮ್‌ಗೆ ಸಿಕ್ತಾ ಭರ್ಜರಿ ಸಿನಿಮಾ?: ಯಾವ್ ಹೀರೋ ಜೊತೆ ನಟಿಸ್ತಾರೆ ನಟಿ?
ಡಾಲಿ ಧನಂಜಯ್ ನಿರ್ಮಾಣದ 'ಟಗರು ಪಲ್ಯ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟ ಚೆಲುವೆ ಅಮೃತಾ ಪ್ರೇಮ್. ಒಂದೇ ಸಿನಿಮಾದಲ್ಲೇ ಅದ್ಭುತ ಯಶಸ್ಸು ಗಿಟ್ಟಿಸಿಕೊಂಡಿದ್ದಾರೆ. ಚೊಚ್ಚಲ ಚಿತ್ರದಲ್ಲೇ ಕನ್ನಡ ಚಿತ್ರರಂಗದ ಭರವಸೆ ನಟಿಯಾಗಿದ್ದಾರೆ.
ಡಾಲಿ ಧನಂಜಯ್ ನಿರ್ಮಾಣದ 'ಟಗರು ಪಲ್ಯ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟ ಚೆಲುವೆ ಅಮೃತಾ ಪ್ರೇಮ್. ಒಂದೇ ಸಿನಿಮಾದಲ್ಲೇ ಅದ್ಭುತ ಯಶಸ್ಸು ಗಿಟ್ಟಿಸಿಕೊಂಡಿದ್ದಾರೆ. ಚೊಚ್ಚಲ ಚಿತ್ರದಲ್ಲೇ ಕನ್ನಡ ಚಿತ್ರರಂಗದ ಭರವಸೆ ನಟಿಯಾಗಿದ್ದಾರೆ. ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಒಂದೇ ಸಿನಿಮಾ, ಅಮೋಘ ಅಭಿನಯ, ಅದ್ಭುತ ಯಶಸ್ಸು. ಇವೆಲ್ಲವೂ ಸಿಕ್ಕಿದ್ದು, ನೆನಪಿರಲಿ ಪ್ರೇಮ್ ಪುತ್ರಿ ಅಮೃತಾರಿಗೆ. 'ಟಗರು ಪಲ್ಯ' ಚಿತ್ರದಿಂದ ಕರುನಾಡಿನಾದ್ಯಂತ ಇವರ ಹೆಸರೇ ಕೇಳಿ ಬರುತ್ತಿದೆ. ಇದೀಗ ಅಮೃತಾ ಪ್ರೇಮ್ ಮತ್ತೊಂದು ಹೊಸ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರ ತಂದೆ ಪ್ರೇಮ್ ಸದ್ಯ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.
Add Asianetnews Kannada as a Preferred Source
