ಸಿಎಂ ಬೊಮ್ಮಾಯಿ ಬಗ್ಗೆ ಬಂತು ಆಲ್ಬಂ ಸಾಂಗ್

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾಜ್ಯದಲ್ಲಿ ಕಾಮನ್ ಮ್ಯಾನ್ ಸಿಎಂ ಅಂತಲೇ ಫೇಮಸ್. ಇದೀಗ ಸಿಎಂ ಅವರ ಬಗ್ಗೆ ಈಗ ಆಲ್ಬಂ ಹಾಡೊಂದು ಸಿದ್ಧವಾಗಿದೆ.

Share this Video
  • FB
  • Linkdin
  • Whatsapp

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾಜ್ಯದಲ್ಲಿ ಕಾಮನ್ ಮ್ಯಾನ್ ಸಿಎಂ ಅಂತಲೇ ಫೇಮಸ್. ತನ್ನ ಸರಳ ನಡೆ ನುಡಿಯಿಂದ ಅಭಿವೃದ್ಧಿ ಕಡೆ ಹೆಚ್ಚು ಗಮನ ಕೊಟ್ಟು ರಾಜ್ಯದ ಅಭಿವೃದ್ಧಿಯ ಹರಿಕಾರ ಎನಿಸಿಕೊಂಡಿರೋ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಬಗ್ಗೆ ಈಗ ಆಲ್ಬಂ ಹಾಡೊಂದು ಸಿದ್ಧವಾಗಿದೆ. ನಮ್ಮ ಸಿಎಂ ಬೊಮ್ಮಾಯಿ ಅನ್ನೋ ಹಾಡು ಇದೀಗ ಬಿಡುಗಡೆ ಆಗಿದೆ. ರಾಜ್ಯ ಬಿಜೆಪಿ ಸರ್ಕಾರದಲ್ಲಿ ಅಲ್ಪ ಅವಧಿಯಲ್ಲೇ ಜನ ಮನಸೂರೆಗೊಳಿಸುವಂತೆ ಶ್ರಮಿಸಿದ ಕಾಮನ್ ಮ್ಯಾನ್ ಬೊಮ್ಮಾಯಿ ಅಂತ ಕರೆಸಿಕೊಂಡಿರೋ ಬಸವರಾಜ್ ಬೊಮ್ಮಾಯಿ ವಿಧಾನಸಬೆ ಚುನಾವನೆಗೆ ಸಜ್ಜಾಗುತ್ತಿದ್ದಾರೆ. ಈ ಸಮಯದಲ್ಲಿ ಈ ಹಾಡು ಬಿಡುಗಡೆ ಆಗಿದ್ದು, ಬೊಮ್ಮಾಯಿ ಅವರ ಕೆಲಸ ಹಾಗು ಜನಸಾಮಾನ್ಯರ ಮಧ್ಯೆ ಬೆರೆತ ಎಲ್ಲಾ ಚಿತ್ರಣವನ್ನ ಈ ಹಾಡಿನಲ್ಲಿ ಕಟ್ಟಿಕೊಡಲಾಗಿದೆ. ಮತ್ತೆ ಬಿಜೆಪಿ ಮತ್ತೊಮ್ಮೆ ಬೊಮ್ಮಾಯಿ ಅನ್ನೋ ಹಿನ್ನೆಲೆಯಲ್ಲಿ ಈ ಹಾಡು ಸಿದ್ಧವಾಗಿದೆ.

Related Video