Love You Rachchu: ಅಜಯ್-ರಚ್ಚು ಚಿತ್ರವನ್ನು ಹೊಗಳಿದ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು!
ಸಿನಿಮಾ ಆರಂಭದಲ್ಲಿಯೇ ಸಾಕಷ್ಟು ಸುದ್ದಿ ಮಾಡಿದ ಅಜಯ್ ರಾವ್ ಮತ್ತು ರಚಿತಾ ರಾಮ್ ಅಭಿನಯದ ಬಹು ನಿರೀಕ್ಷಿತ 'ಲವ್ ಯು ರಚ್ಚು' ಚಿತ್ರ ಇಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಇದಕ್ಕೂ ಮುನ್ನ ಚಿತ್ರತಂಡ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳಿಗಾಗಿ ವಿಶೇಷ ಶೋ ಆಯೋಜನೆ ಮಾಡಿತ್ತು.
ಸಿನಿಮಾ ಆರಂಭದಲ್ಲಿಯೇ ಸಾಕಷ್ಟು ಸುದ್ದಿ ಮಾಡಿದ ಅಜಯ್ ರಾವ್ (Ajay Rao) ಮತ್ತು ರಚಿತಾ ರಾಮ್ (Rachita Ram) ಅಭಿನಯದ ಬಹು ನಿರೀಕ್ಷಿತ 'ಲವ್ ಯು ರಚ್ಚು' (Love You Rachchu) ಚಿತ್ರ ಇಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಇದಕ್ಕೂ ಮುನ್ನ ಚಿತ್ರತಂಡ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳಿಗಾಗಿ ವಿಶೇಷ ಶೋ ಆಯೋಜನೆ ಮಾಡಿತ್ತು. ಈ ಶೋ ನೋಡಿದ ಹಲವಾರು ಸೆಲೆಬ್ರಿಟಿಗಳು ಸಿನಿಮಾಗಳಲ್ಲಿ ಫ್ರೆಶ್ ಕಾಂಬಿನೇಷನ್ ಇದ್ದರೆ ಅದು ಫ್ರೆಶ್ ಅನ್ನಿಸುತ್ತೆ. ಅದೇ ರೀತಿ ಅಜಯ್ ರಾವ್ ಹಾಗೂ ರಚಿತಾ ರಾಮ್ ಕಾಂಬಿನೇಷನ್ ಇಷ್ಟವಾಯ್ತು. ಚಿತ್ರದ ಕ್ಲೈಮ್ಯಾಕ್ಸ್ ಬಹಳ ಅನಿರೀಕ್ಷಿತವಾಗಿದೆ.
Love You Rachchu Trailer: ಈ ಟೈಟಲ್ ಆಯ್ಕೆ ಮಾಡಿಕೊಳ್ಳಲು ಕಾರಣ ಏನು ಗೊತ್ತಾ?
ಇಡೀ ಸಿನಿಮಾ ಫ್ಯಾಮಿಲಿ ಎಂಟರ್ಟೈನರ್ ಆಗಿದೆ. ಅಜಯ್ ಅವರ ಪಾತ್ರ ಪೋಷಣೆ ಬಹಳ ಇಷ್ಟವಾಯ್ತು ಎಂದಿದ್ಧಾರೆ. ಅಲ್ಲದೇ ಸಸ್ಪೆನ್ಸ್ ಸಿನಿಮಾವಾಗಿರೋದರಿಂದ ಹೆಚ್ಚೇನೂ ಹೇಳುವುದಿಲ್ಲ ಎಂದೆಲ್ಲ ಚಿತ್ರದ ಬಗ್ಗೆ ಹೊಗಳಿದ್ದಾರೆ. ಈ ಚಿತ್ರದಲ್ಲಿ ಅಜಯ್ ರಾವ್ ಮಗಳು ಚರಿಷ್ಮಾ (Charishma) ಬಾಲ ನಟಿಯಾಗಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. 'ಲವ್ ಯು ರಚ್ಚು' ಚಿತ್ರ ರೊಮ್ಯಾಂಟಿಕ್ ಕಥಾಹಂದರವನ್ನೊಳಗೊಂಡಿದ್ದು, ಚಿತ್ರದ ಕಥೆಯನ್ನು ಶಶಾಂಕ್ (Shashank) ಬರೆದಿದ್ದಾರೆ. ಈ ಚಿತ್ರಕ್ಕೆ ಶಂಕರ್ ರಾಜ್ ಆ್ಯಕ್ಷನ್ ಕಟ್ ಹೇಳಿದ್ದು, ಕದ್ರಿ ಮಂಜುನಾಥ್ ಸಂಗೀತ ಸಂಯೋಜಿಸಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment