ಹೆದರಿಸೋರು ಇರುತ್ತಾರೆ ಹೆದರಬಾರದು: ಯಶ್‌ ಮಾತುಗಳನ್ನ ನೆನಪಿಸಿಕೊಂಡ ಸಪ್ತಮಿ ಗೌಡ

ನಟಿ ಸಪ್ತಮಿ ಗೌಡ ಯಶ್‌ ಮಾತುಗಳನ್ನ ನೆನಪಿಸಿಕೊಂಡಿದ್ದಾರೆ. ಹೌದು ಹೆದರಿಸೋರು ಇರುತ್ತಾರೆ ಹೆದರಬಾರದು ಎಂಬ ಯಶ್ ಮಾತನಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

ಯುವನಟಿ ಸಪ್ತಮಿ ಗೌಡ ಅವರು ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದ ಕಾಂತಾರ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ಸಿನಿಪ್ರಿಯರ ಲೀಲಾ ಅಂತಲೇ ಹೆಸರುವಾಸಿಯಾದರು. ಕಾಂತಾರಾ ಚಿತ್ರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವುದರಿಂದ ನಟಿ ಸಪ್ತಮಿ ಗೌಡ ಕೂಡ ಬಳಿಕ ಹಲವು ಆಫರ್ ಪಡೆದುಕೊಂಡಿದ್ದಾರೆ. ಅಭಿಷೇಕ್ ಅಂಬರೀಷ್ ಜತೆ 'ಕಾಳಿ' ಚಿತ್ರದಲ್ಲಿ ನಟಿಸಿದ ಬಳಿಕ ಯುವ ರಾಜ್‌ಕುಮಾರ್ ನಟನೆಯ 'ಯುವ' ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಯುವ ಚಿತ್ರವು ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಇದೀಗ ನಟಿ ಸಪ್ತಮಿ ಗೌಡ ಯಶ್‌ ಮಾತುಗಳನ್ನ ನೆನಪಿಸಿಕೊಂಡಿದ್ದಾರೆ. ಹೌದು ಹೆದರಿಸೋರು ಇರುತ್ತಾರೆ ಹೆದರಬಾರದು ಎಂಬ ಯಶ್ ಮಾತನಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕಂಪ್ಲೀಟ್ ಡಿಟೈಲ್ಸ್‌ಗೆ ಈ ವಿಡಿಯೋವನ್ನು ವೀಕ್ಷಿಸಿ.

Related Video