Asianet Suvarna News Asianet Suvarna News

ನ್ಯೂಸ್ ಪೇಪರ್ ಡ್ರೆಸ್‌ನಲ್ಲಿ ಕಂಗೊಳಿಸಿದ ನಿವೇದಿತಾ ಗೌಡ

ನಟಿ ನಿವೇದಿತಾ ಗೌಡ ಹೊಸ ಅವತಾರದಲ್ಲಿ ಕಂಗೊಳಿಸಿದ್ದು, ಪೇಪರ್ ಡ್ರೆಸ್ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ನ್ಯೂಸ್ ಪೇಪರ್'ನಲ್ಲಿ ಡ್ರೆಸ್ ಹೊಲಿಸಿಕೊಂಡಿದ್ದು, ಕಪ್ಪು ಬಣ್ಣದ ಟೀ ಶರ್ಟ್ ಮೇಲೆ ಪೇಪರ್ ಡ್ರೆಸ್ ಧರಿಸಿದ್ದಾರೆ. ಗಿಚ್ಚಿ ಗಿಲಿಗಿಲಿ ಪ್ರೋಗ್ರಾಂಗೋಸ್ಕರ ನಿವಿ ನ್ಯೂಸ್ ಪೇಪರ್‌'ನಲ್ಲಿ ಡ್ರೆಸ್‌ ಹೊಲಿಸಿಕೊಂಡಿದ್ದಾರೆ. ಚಂದನ್‌ ಶೆಟ್ಟಿ ಹೊಸ ಬಟ್ಟೆ ಕೊಡಿಸಿಲ್ಲ ಎಂದು ಹೀಗೆ ಮಾಡಿ ಬಿಟ್ರೆ ಹೇಂಗೆ ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದು, ಮೊನ್ನೆ ಫಾರಿನ್‌'ಗೆ ಹೋಗಿ ಸಿಕ್ಕಾಪಟ್ಟೆ ಡ್ರೆಸ್ ಪರ್ಚೇಸ್‌ ಮಾಡಿಕೊಂಡು ಬಂದ್ರೂ, ಯಾಕೆ ಹಿಂಗೆ ಪೇಪರ್‌ ಬಟ್ಟೆ ಹೋಲಿಸಿಕೊಂಡಿದ್ದೀರಿ ಎಂದು ಕಾಮೆಂಟ್ ಹಾಕುತ್ತಿದ್ದಾರೆ. ಬೊಂಬೆಯ ಹೊಸ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

ಡಾ. ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ: 'ಯಜಮಾನ'ನ ನೂರೊಂದು ನೆನಪು ಅಮರ