ಮದುವೆಗೆ ಮಮತೆಯ ಕರೆಯೋಲೆ ಕೊಡುತ್ತಿರುವ ಸಿಂಹ-ಪ್ರಿಯಾ: ಯಾರೆಲ್ಲಾ ಸ್ಟಾರ್ಸ್ ಬರಲಿದ್ದಾರೆ?

ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅದ್ದೂರಿಯಾಗಿ ಮದುವೆ ತಯಾರಿ ನಡೆಸಿದ್ದು,  ಸ್ಯಾಂಡಲ್ ವುಡ್ ಸ್ನೇಹಿತರಿಗೆ ಸಿಂಹ-ಪ್ರಿಯಾ ಜೋಡಿ ತಮ್ಮ ಕಲ್ಯಾಣಕ್ಕೆ ಆಹ್ವಾನ ನೀಡುತ್ತಿದೆ.
 

Share this Video
  • FB
  • Linkdin
  • Whatsapp

ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ತಮ್ಮ ಸಿನಿಮಾರಂಗದ ಸ್ನೇಹಿತ ಬಳಗವನ್ನು ಮದುವೆಗೆ ಕರೆಯುತ್ತಿದ್ದು, ಮನೆ ಮನೆಗೆ ತೆರಳಿ ಆಹ್ವಾನಿಸುತ್ತಿದ್ದಾರೆ. ನಟ ಕಿಚ್ಚ ಸುದೀಪ್, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ರಿಯಲ್ ಸ್ಟಾರ್ ಉಪೇಂದ್ರ, ಕ್ರೇಜಿ ಸ್ಟಾರ್ ರವಿಚಂದ್ರನ್, ಅನಂತ್ ನಾಗ್, ಅಮೂಲ್ಯ, ನೆನಪಿರಲಿ ಪ್ರೇಮ್, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಮಾಲಾಶ್ರೀ, ಹೀಗೆ ಎಲ್ಲಾ ಸೆಲೆಬ್ರೆಟಿಗಳಿಗೂ ಮದುವೆ ಆಮಂತ್ರಣ ಕೊಟ್ಟಿದ್ದಾರೆ. ನವರಸ ನಾಯಕ ಜಗ್ಗೇಶ್ ಹರಿಪ್ರಿಯಾ ವಸಿಷ್ಠ ಜೋಡಿಯ ಮದುವೆ ಕರೆಯೋಲೆ ಓದಿ ಇಬ್ಬರಿಗೂ ಆಶೀರ್ವದಿಸಿದ್ದು ವಿಶೇಷವಾಗಿದೆ. ಇನ್ನು ಜನವರಿ 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಮದುವೆ ನಡೆಯುತ್ತಿದೆ. ಇದೇ ತಿಂಗಳು 28ಕ್ಕೆ ಬೆಂಗಳೂರು ಹೊರವಲಯದ ಗೋಲ್ಡನ್ ಫಾರ್ಮ್ ಹೌಸ್'ನಲ್ಲಿ ಆರತಕ್ಷತೆ ನಡೆಯಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಶ್ ಮನೆಯಲ್ಲಿ ಸುಗ್ಗಿ ಹಬ್ಬದ ಸಂಭ್ರಮ: ಸಂಕ್ರಾಂತಿ ರತ್ತೋ ಎಂದ ಶ್ರೀಲೀ ...

Related Video