ಸೆಟ್‌ನಲ್ಲಿ ಕುಡಿದು ತೂರಾಡಿದ ನಟಿ ಅಶಿಕಾ ರಂಗನಾಥ್; ವಿಡಿಯೋ ವೈರಲ್

ರೇಮೋ ಸಿನಿಮಾದ ಶೂಟಿಂಗ್‌ನಲ್ಲಿ ನಟಿ ಆಶಿಕಾ ರಂಗನಾಥ್ ಕುಡಿದು ತೂರಾಡಿರುವ ವಿಡಿಯೋ ವೈರಲ್ ಆಗಿದೆ. ನಿಜಕ್ಕೂ ಆಶಿಕಾ ಕುಡಿದು ಗಲಾಟೆ ಮಾಡಿದ್ರಾ ಅಥವಾ ಇದು ಪ್ರಮೋಷನ್ ಗಿಮಿಕ್ ಇರಬಹುದಾ ಎನ್ನುವ ಅನುಮಾನ ವ್ಯಕ್ತವಾಗಿದೆ. 

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್ ನಟಿ ಆಶಿಕಾ ರಂಗನಾಥ್ ಸದ್ಯ ರೇಮೋ ಸಿನಿಮಾದ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಪವನ್ ಒಡೆಯರ್ ಸಾರಥ್ಯದಲ್ಲಿ ಮೂಡಿ ಬಂದಿರುವ ರೇಮೋ ಸಿನಿಮಾದ ಶೂಟಿಂಗ್ ನಲ್ಲಿ ಆಶಿಕಾ ರಂಗನಾಥ್ ಕುಡಿದು ತೂರಾಡಿದ್ದಾರೆ. ಟೈಟ್ ಆಗಿದ್ದ ಆಶಿಕಾರನ್ನು ಹಿಡಿಯುವುದು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿತ್ತು. ಸದ್ಯ ಈ ವಿಡಿಯೋ ವೈರಲ್ ಆಗಿದೆ. ಅಂದಹಾಗೆ ಇದು ನಿಜನಾ ಅಥವಾ ಪ್ರಮೋಷನ್ ಗಿಮಿಕ್ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ರೇಮೋ ಸಿನಿಮಾದ ರಿಲೀಸ್ ಡೇಟ್ ಹತ್ತಿರವಾಗುತ್ತಿರುವ ಕಾರಣ ಈ ರೀತಿಯ ಪ್ರಮೋಷನ್ ಮಾಡಲಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ಏನೆ ಆದರೂ ಆಶಿಕಾ ವಿಡಿಯೋ ಮಾತ್ರ ಎಲ್ಲಾ ಕಡೆ ಹರಿದಾಡುತ್ತಿದೆ.

Related Video