Anitha Bhat: 'ಇಂದಿರಾ' ಚಿತ್ರದ 'ಸ್ಟೆಪ್ಸ್ ಟು ಡೆಸ್ಟಿನಿ' ಸಾಂಗ್ ರಿಲೀಸ್!

ಸ್ಯಾಂಡಲ್‌ವುಡ್ ನಟಿ ಅನಿತಾ ಭಟ್ ಈಗಾಗಲೇ ಹಲವು ಸಿನಿಮಾಗಳಲ್ಲಿ ಮಿಂಚಿದ್ದು, ಇದೀಗ ತಮ್ಮದೇ ಅನಿತಾ ಭಟ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ 'ಇಂದಿರಾ' ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಸಿನಿಮಾದ ಮೊದಲ ಸಾಂಗ್ ಬಿಡುಗಡೆಯಾಗಿದೆ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್ (Sandalwood) ನಟಿ ಅನಿತಾ ಭಟ್ (Anitha Bhat) ಈಗಾಗಲೇ ಹಲವು ಸಿನಿಮಾಗಳಲ್ಲಿ ಮಿಂಚಿದ್ದು, ಇದೀಗ ತಮ್ಮದೇ ಅನಿತಾ ಭಟ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ 'ಇಂದಿರಾ' (Indira) ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಸಿನಿಮಾದ ಮೊದಲ ಸಾಂಗ್ ಬಿಡುಗಡೆಯಾಗಿದೆ. ಎ2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ 'ಸ್ಟೆಪ್ಸ್ ಟು ಡೆಸ್ಟಿನಿ' (Steps to Destiny) ಹಾಡು ಇದೀಗ ಕೇಳುಗರ ಗಮನಸೆಳೆಯುತ್ತಿದೆ. ನಿರ್ದೇಶಕ ರಿಷಿಕೇಶ್ (Rishikesh) ಬರೆದಿರುವ ಅದ್ಭುತ ಲಿರಿಕ್ಸ್‌ಗೆ, ಲೋಹಿತ್ ನಾಯ್ಕ್ (Lohith Nayak) ಸಂಗೀತ ನಿರ್ದೇಶನ ಮಾಡಿದ್ದು ಸುಪ್ರಿಯ ರಾಮ್ ಸುಶ್ರಾವ್ಯ ಕಂಠದಲ್ಲಿ ಹಾಡು ಮೂಡಿ ಬಂದಿದೆ. 

KGF 2: ಯಶ್ ಎದುರು ಪೈಪೋಟಿಗಿಳಿಯಲು ಹಿಂದೇಟು ಹಾಕಿದ 'ಲಾಲ್ ಸಿಂಗ್ ಛಡ್ಡಾ'

ಇನ್ನು 'ಇಂದಿರಾ' ಸೈಕಲಾಜಿಕಲ್‌ ಥ್ರಿಲ್ಲರ್‌ ಸಿನಿಮಾವಾಗಿದ್ದು, ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ. ಮುಖ್ಯಭೂಮಿಕೆಯಲ್ಲಿ ಅನಿತಾ ಭಟ್ ನಟಿಸಿದ್ದು, ಉಳಿದಂತೆ ಬಿಗ್‌ ಬಾಸ್‌ ಖ್ಯಾತಿಯ ರೆಹಮಾನ್‌ ಹಾಸನ್‌, ಚಕ್ರವರ್ತಿ ಚಂದ್ರಚೂಡ್‌, ನೀತು ಹಾಗೂ ಶಫಿ ಬಣ್ಣ ಹಚ್ಚಿದ್ದಾರೆ. ಇಂದಿರಾ ಸಿನಿಮಾಕ್ಕೆ ರಿಷಿಕೇಶ್ ಆಕ್ಷನ್ ಕಟ್ ಹೇಳುವುದರ ಜೊತೆಗೆ ಛಾಯಾಗ್ರಹಣ ಹಾಗೂ ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಈ ಚಿತ್ರಕ್ಕೆ ಲೋಹಿತ್ ಎಲ್ ನಾಯಕ್ ಸಂಗೀತ ನಿರ್ದೇಶನ, ಅಭಿಷೇಕ್ ಮಠದ್ ನೃತ್ಯ ನಿರ್ದೇಶನವಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video