Upendra: ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್!

ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್ ಉಪೇಂದ್ರ 'ಹೋಮ್ ಮಿನಿಸ್ಟರ್' ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಈ ಮಧ್ಯೆ ಸದ್ದಿಲ್ಲದೇ ಒಂದು ಬಿಗ್ ಬ್ರೇಕಿಂಗ್ ನ್ಯೂಸ್ ನೀಡುವುದಕ್ಕೆ ಸಜ್ಜಾಗಿದ್ದಾರೆ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್ ಉಪೇಂದ್ರ (Upendra) 'ಹೋಮ್ ಮಿನಿಸ್ಟರ್' (Home Minister) ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಈ ಮಧ್ಯೆ ಸದ್ದಿಲ್ಲದೇ ಒಂದು ಬಿಗ್ ಬ್ರೇಕಿಂಗ್ ನ್ಯೂಸ್ ನೀಡುವುದಕ್ಕೆ ಸಜ್ಜಾಗಿದ್ದಾರೆ. ಹೌದು! ಮಾರ್ಚ್ 9ರಂದು ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ 'ಸೇವ್ ದಿಸ್‌ ಡೇಟ್' ಅಂತ ಇದೆ. ಮಾರ್ಚ್ 11ರ ಮಧ್ಯಾಹ್ನ 12.46ಕ್ಕೆ ಅವರೊಂದು ಮಹತ್ವದ ಘೋಷಣೆ ಮಾಡಲಿದ್ದಾರೆ. ಆ ಕಾರಣಕ್ಕೆ 'ಸೇವ್ ದಿಸ್‌ ಡೇಟ್' ಅಂತ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ನೋಡಿದ್ದೇ ತಡ ಅವರ ಅಭಿಮಾನಿಗಳು (Fans) ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. 

Kabza Movie: ಉಪ್ಪಿ ಅಡ್ಡಾಕ್ಕೆ ಎಂಟ್ರಿ ಕೊಟ್ಟ ನಟಿ ಶ್ರೀಯಾ ಶರಣ್‌

ಹಾಗಾಗಿ ಅಂದು ಉಪೇಂದ್ರ ಏನು ಮಾಹಿತಿ ನೀಡಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ. ವಿಶೇಷವಾಗಿ ಮಾರ್ಚ್ 11ರಂದು ಉಪೇಂದ್ರ ನಿರ್ದೇಶನದ 11ನೇ ಸಿನಿಮಾ ಘೋಷಣೆ ಆಗುವ ಸಾಧ್ಯತೆ ಇದೆ. ಮಾತ್ರವಲ್ಲದೇ ಪ್ರಜಾಕೀಯ ಪಕ್ಷದ ಬಗ್ಗೆ ಯಾವುದಾದರೂ ಮಾಹಿತಿಯನ್ನು ಉಪೇಂದ್ರ ಹಂಚಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇತ್ತೀಚೆಗಷ್ಟೇ ಉಪೇಂದ್ರ ಆಕ್ಷನ್ ಕಟ್ ಮಾಡಲಿದ್ದಾರೆ ಎನ್ನಲಾಗಿದ್ದ ಸಿನಿಮಾದ ಫಸ್ಟ್ ಲುಕ್‌ವೊಂದು (Firstlook) ಲೀಕ್ ಆಗಿತ್ತು. ಫಸ್ಟ್ ಲುಕ್‌ನಲ್ಲಿ ಸಿನಿಮಾದ ಟೈಟಲ್‌ ಮೂರು ನಾಮದ ಸಿಂಬಲ್ ಹೊಂದಿತ್ತು.ಈ ಹಿಂದೆ 'ಸೂಪರ್' (Super) ಸಿನಿಮಾಗೂ ಅವರು ಚಿಹ್ನೆಯನ್ನೇ ಬಳಸಿದ್ದರು.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video