Kabza Movie: ಉಪ್ಪಿ ಅಡ್ಡಾಕ್ಕೆ ಎಂಟ್ರಿ ಕೊಟ್ಟ ನಟಿ ಶ್ರೀಯಾ ಶರಣ್‌

ಆರ್‌.ಚಂದ್ರು ನಿರ್ದೇಶನದ, ಉಪೇಂದ್ರ ಹಾಗೂ ಸುದೀಪ್‌ ಕಾಂಬಿನೇಶನ್‌ನ ‘ಕಬ್ಜ’ ಚಿತ್ರದ ಇಬ್ಬರು ನಾಯಕಿಯರ ಪೈಕಿ ಒಬ್ಬರ ಆಗಮನವಾಗಿದೆ. ಮಧುಮತಿ ಪಾತ್ರದ ಮೂಲಕ ಕನ್ನಡಕ್ಕೆ ಆಗಮಿಸಿರುವುದು ಖ್ಯಾತ ನಟಿ ಶ್ರೀಯಾ ಶರಣ್‌. 

Share this Video
  • FB
  • Linkdin
  • Whatsapp

ಆರ್‌.ಚಂದ್ರು (R Chandru) ನಿರ್ದೇಶನದ, ಉಪೇಂದ್ರ (Upendra) ಹಾಗೂ ಕಿಚ್ಚ ಸುದೀಪ್ (Kichcha Sudeep) ಕಾಂಬಿನೇಶನ್‌ನ 'ಕಬ್ಜ' (Kabza) ಚಿತ್ರದ ಇಬ್ಬರು ನಾಯಕಿಯರ ಪೈಕಿ ಒಬ್ಬರ ಆಗಮನವಾಗಿದೆ. ಮಧುಮತಿ ಪಾತ್ರದ ಮೂಲಕ ಕನ್ನಡಕ್ಕೆ ಆಗಮಿಸಿರುವುದು ಖ್ಯಾತ ನಟಿ ಶ್ರೀಯಾ ಶರಣ್‌ (Shriya Saran). ತುಂಬಾ ದಿನಗಳ ನಂತರ ಚಿತ್ರರಂಗಕ್ಕೆ ಮರಳಿರುವ ಶ್ರೀಯಾ ಅವರ ಮುಂದೆ 'ಕಬ್ಜ'. 'ಆರ್‌ಆರ್‌ಆರ್‌' (RRR) ಸೇರಿ ಅಜಯ್‌ ದೇವಗನ್‌ (Ajay Devgn) ನಟಿಸುತ್ತಿರುವ ಹಿಂದಿ ಚಿತ್ರ ಕೂಡ ಇದೆ.

Kabza Movie: ಉಪ್ಪಿ-ಕಿಚ್ಚನ 'ಕಬ್ಜ' ಚಿತ್ರಕ್ಕೆ ಹೀರೋಯಿನ್ ಯಾರು ಗೊತ್ತಾ?

'ನಮ್ಮ ಕಬ್ಜ ಚಿತ್ರದಲ್ಲಿ ಇಬ್ಬರು ನಾಯಕಿಯರು ಇದ್ದಾರೆ. ಪ್ಯಾನ್‌ ಇಂಡಿಯಾ ನಟಿಯನ್ನೇ ಕನ್ನಡಕ್ಕೆ ಕರೆದುಕೊಂಡು ಬಂದಿದ್ದೇನೆ. ಶ್ರೀಯಾ ಶರಣ್‌ ಚಿತ್ರದ ಕತೆ ಕೇಳಿ ಥ್ರಿಲ್ಲಾಗಿ ಈ ಚಿತ್ರ ಒಪ್ಪಿಕೊಂಡಿದ್ದಾರೆ. ರಾಣಿಯಾಗಿ ಸ್ಯಾಂಡಲ್‌ವುಡ್‌ಗೆ ಲ್ಯಾಂಡ್‌ ಆಗಿರುವ ಇವರ ಫಸ್ಟ್‌ಲುಕ್‌ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ದೊಡ್ಡ ಸಿನಿಮಾ. ಹೀಗಾಗಿ ತುಂಬಾ ಸಮಯ ಹಿಡಿಯುತ್ತಿದೆ. ಸತತವಾಗಿ ಎರಡು ವರ್ಷಗಳಿಂದ ಚಿತ್ರೀಕರಣ ನಡೆಯುತ್ತಿದೆ. ಈಗ ಕೊನೆಯ ಹಂತಕ್ಕೆ ಬಂದಿದ್ದೇವೆ. ಏಳು ಭಾಷೆಗಳಿಗೆ ಕನ್ನಡ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸುತ್ತಿದ್ದೇನೆಂಬ ಹೆಮ್ಮೆ ನನಗೆ ಇದೆ' ಎನ್ನುತ್ತಾರೆ ಆರ್‌ ಚಂದ್ರು. ರವಿ ಬಸ್ರೂರು ಸಂಗೀತ, ಶಿವಕುಮಾರ್‌ ಕಲಾ ನಿರ್ದೇಶನ ಇದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video