Actor Sudeep : ಸಿಸಿಎಲ್ ಕ್ರಿಕೆಟ್ ಮೂಡ್‌ನಲ್ಲಿ ಕಿಚ್ಚ ಸುದೀಪ್! ಶಾರ್ಜಾ ಸೇರಿದ ಅಭಿನಯ ಚಕ್ರವರ್ತಿ ..!

ಭಾರತೀಯ ಚಿತ್ರರಂಗದ ಆರಡಿ ಕಟೌಟ್ ಕಿಚ್ಚ ಸುದೀಪ್ ಮ್ಯಾಕ್ಸ್ ಶೂಟಿಂಗ್ ಮುಗಿಸಿದ್ದಾರೆ. ಸಿನಿಮಾ ಕೆಲಸದಿಂದ ಸ್ವಲ್ಪ ಫ್ರೀ ಆಗಿರೋ ಬಾದ್ ಷಾ ಈಗ ಕ್ರಿಕೆಟ್ ಮೂಡ್‌ಗೆ ಜಾರಿದ್ದಾರೆ.

Share this Video

ಭಾರತೀಯ ಚಿತ್ರರಂಗದ ಬಿಗ್ ಸ್ಟಾರ್‌ಗಳು ಕ್ರಿಕೆಟ್ ಗ್ರೌಂಡ್‌ಗೆ ಇಳಿಯೋ ಸೆಲೆಬ್ರಿಟಿ ಕ್ರಿಕೆಟ್ ಆರಂಭ ಆಗಿದೆ. ಈ ಭಾರಿ ಮೊದಲೆರಡು ಪಂದ್ಯಗಳು ಗಾಲ್ಫ್ ದೇಶ ಶಾರ್ಜಾದಲ್ಲಿ ನಡೆಯುತ್ತಿವೆ. ಹೀಗಾಗಿ ಕಿಚ್ಚನ ಹುಡುಗರು ಶಾರ್ಜಾಗೆ ಹಾರಿದ್ದಾರೆ. ನಟ ಕಿಚ್ಚ ಸುದೀಪ್(Actor Sudeep) ಶಾರ್ಜಾ ಗೆ ಹಾರಿದ್ದಾರೆ. ಸುದೀಪ್‌ಗೆ ದುಬೈ ಶಾರ್ಜಾದಲ್ಲಿ(Sharjah) ದೊಡ್ಡ ಅಭಿಮಾನಿ ಬಳಗ ಇದೆ. ದುಬೈನ(Dubai) ಬುರ್ಜ್ ಕಲೀಫಾ ಕಟ್ಟದಲ್ಲಿ ಕಿಚ್ಚನ ವಿಕ್ರಾಂತ್ ರೋಣ ಬಾವುಟ ಹಾರಿತ್ತು. ಸಿಸಿಎಲ್(CCL) ಪ್ರೋಮೋ ಕೂಡ ರಿಲೀಸ್ ಆಗಿತ್ತು. ಈಗ ಸಿಸಿಎಲ್‌ಗಾಗಿ ಶಾರ್ಜಾಗೆ ಹೋಗಿರೋ ಸುದೀಪ್‌ಗೆ ಅಲ್ಲಿನ ಕನ್ನಡತಿಯರು ಆರತಿ ಎತ್ತಿ ಹಾರ ಹಾಕಿ ಸಾಂಗ್ ಹಾಡಿ ಬರಮಾಡಿಕೊಂಡಿದ್ದಾರೆ. ಕಿಚ್ಚ ಸುದೀಪ್‌ಗೆ ನಟನೆ ಕ್ರಿಕೆಟ್(Cricket) ಬಿಟ್ರೆ ಮತ್ತೊಂದು ಇಷ್ಟದ ಕೆಲಸ ಅಂದ್ರೆ ಅಡುಗೆ ಮಾಡಿ ಬೇರೆಯವರಿಗೆ ಬಡಿಸೋದು. ಕಿಚ್ಚ ಅದ್ಭುತವಾಗಿ ಅಡುಗೆ ಮಾಡ್ತಾರೆ ಅನ್ನೋದು ನಿಮ್ಗೆಲ್ಲಾ ಗೊತ್ತು. ಕಿಚ್ಚನ ಅಡುಗೆ ಗತ್ತು ಶಾರ್ಜಾದ ಹೋಟೆಲ್ ಶೆಫ್ಗಳಿಗೂ ಗೊತ್ತು. ಹೀಗಾಗಿ ಸುದೀಪ್ ಹೋಟೆಲ್ಗೆ ಎಂಟ್ರಿ ಕೊಡುತ್ತಿದ್ದಂತೆ ಅಲ್ಲಿನ ಶೆಫ್ಗಳು ಸ್ಪೆಷಲ್ ಆಗಿ ಕಿಚ್ಚನನ್ನನ ವೆಲ್ಕಮ್ ಮಾಡಿದ್ದಾರೆ. ಆ ವಿವೀಡಿಯೋ ಈಗ ವೈರಲ್ ಆಗುತ್ತಿದೆ. 

ಇದನ್ನೂ ವೀಕ್ಷಿಸಿ:  ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಲವು ಸಾಧಕರಿಗೆ ಸುವರ್ಣ ಸಾಧಕರು ಪ್ರಶಸ್ತಿ ಪ್ರದಾನ

Related Video