Asianet Suvarna News Asianet Suvarna News

ನೋ ಬಂಕ್, ಕೇವಲ ಹೊಡೆದಾಟ; ಕಾಲೇಜು ಸ್ಟೋರಿ ರಿವೀಲ್ ಮಾಡಿದ ಶರಣ್-ನಿಶ್ವಿಕಾ

ಸ್ಯಾಂಡಲ್‌ವುಡ್‌ನಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದ ಗುರುಶಿಷ್ಯರು ಸಿನಿಮಾ ಅದ್ದೂರಿಯಾಗಿ ತೆರೆಗೆ ಬಂದಿದೆ. ಸ್ಯಾಂಡಲ್ ವುಡ್ ಅಧ್ಯಕ್ಷ ಶರಣ್ ಮತ್ತು ನಿಶ್ವಿಕಾ ನಾಯ್ಡು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಗುರುಶಿಷ್ಯರು ಸಿನಿಮಾ ಸೆಪ್ಟಂಬರ್ 23ರಂದು ರಿಲೀಸ್ ಆಗಿದೆ.

Sep 23, 2022, 2:21 PM IST

ಸ್ಯಾಂಡಲ್‌ವುಡ್‌ನಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದ ಗುರುಶಿಷ್ಯರು ಸಿನಿಮಾ ಅದ್ದೂರಿಯಾಗಿ ತೆರೆಗೆ ಬಂದಿದೆ. ಸ್ಯಾಂಡಲ್ ವುಡ್ ಅಧ್ಯಕ್ಷ ಶರಣ್ ಮತ್ತು ನಿಶ್ವಿಕಾ ನಾಯ್ಡು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಗುರುಶಿಷ್ಯರು ಸಿನಿಮಾ ಸೆಪ್ಟಂಬರ್ 23ರಂದು ರಿಲೀಸ್ ಆಗಿದೆ. ಗುರುಶಿಷ್ಯರು ಅಂದಾಕ್ಷಣ 1981ರಲ್ಲಿ ಬಂದ ಗುರುಶಿಷ್ಯರು ನೆನಪಾಗುತ್ತೆ. ಆದರೆ ಇದು 2022ರಲ್ಲಿ ಬಂದ ಗುರುಶಿಷ್ಯರು. ಕ್ರೀಡೆ ಬಗ್ಗೆ ಅದರಲ್ಲೂ ಖೋ ಖೋ..ಆಟದ ಬಗ್ಗೆ ಇರುವ ಸಿನಿಮಾವಾಗಿದೆ. ಗುರು ಆಗಿ ಶರಣ್ ಕಾಣಿಸಿಕೊಂಡಿದ್ದಾರೆ. ಪಿಟಿ ಮಾಸ್ಟರ್ ಆಗಿ ಕಾಣಿಸಿಕೊಂಡಿರುವ ಶರಣ್ ತನ್ನ ಪಾತ್ರದ ಬಗ್ಗೆ ಸಿನಿಮಾದ ಬಗ್ಗೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಜಡೇಶ್ ಸಾರಥ್ಯದಲ್ಲಿ ಬಂದ ಸಿನಿಮಾದ ಹಾಡುಗಳು ಹಿಟ್ ಆಗಿದ್ದು ನಿರೀಕ್ಷೆ ಹೆಚ್ಚಿಸಿತ್ತು. ಈ ಬಗ್ಗೆ ಮಾತನಾಡಿ ಶರಣ್, ಈ ಸಿನಿಮಾದ ಕಥೆ ಹುಟ್ಟಿದ್ದು ಲಾಕ್ ಡೌನ್ ಸಮಯದಲ್ಲಿ ಎಂದು ಹೇಳಿದರು. ಇನ್ನು ಇದೇ ಸಮಯದಲ್ಲಿ ತಮ್ಮ ಕಾಲೇಜು ಸ್ಟೋರಿಯನ್ನು ರಿವೀಲ್ ಮಾಡಿದ್ದಾರೆ.