
ಸಿನಿಮಾ ಟೈಟಲ್ ಆಯ್ತು ಪುನೀತ್ ಚಿತ್ರದ ಈ ಹಾಡು; ಪೃಥ್ವಿ-ಪ್ರಮೋದ್ ನಟನೆ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಸೂಪರ್ ಹಿಟ್ ವಂಶಿ ಸಿನಿಮಾದ ಭುವನಂ ಗಗನಂ ಹಾಡನ್ನು ಯಾರು ತಾನೆ ಕೇಳಿಲ್ಲ. ಗಾನಪ್ರಿಯರ ಹೃದಯ ಗೆದ್ದಿದ್ದ ಈ ಹಾಡಿನ ಸಾಲು ಇದೀಗ ಸಿನಿಮಾವಾಗುತ್ತಿದೆ. ಹೌದು, ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಿನಿಮಾ ಸೆಟ್ಟೇರಿದ್ದು ಚಿತ್ರಕ್ಕೆ ಭುವನಂ ಗಗನಂ ಎಂದು ಟೈಟಲ್ ಇಡಲಾಗಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಸೂಪರ್ ಹಿಟ್ ವಂಶಿ ಸಿನಿಮಾದ ಭುವನಂ ಗಗನಂ ಹಾಡನ್ನು ಯಾರು ತಾನೆ ಕೇಳಿಲ್ಲ. ಗಾನಪ್ರಿಯರ ಹೃದಯ ಗೆದ್ದಿದ್ದ ಈ ಹಾಡಿನ ಸಾಲು ಇದೀಗ ಸಿನಿಮಾವಾಗುತ್ತಿದೆ. ಹೌದು, ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಿನಿಮಾ ಸೆಟ್ಟೇರಿದ್ದು ಚಿತ್ರಕ್ಕೆ ಭುವನಂ ಗಗನಂ ಎಂದು ಟೈಟಲ್ ಇಡಲಾಗಿದೆ. ಅಂದಹಾಗೆ ಈ ಸಿನಿಮಾದಲ್ಲಿ ದಿಯಾ ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ್ ಮತ್ತು ಪ್ರಮೋದ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎಸ್ ವಿಸಿ ಫಿಲ್ಮಂಸ್ ಎಂಬ ಪ್ರೊಡಕ್ಷನ್ ಹೌಸ್‌ನಲ್ಲಿ ಎಂ ಮುನೇಗೌಡ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಈ ಸಿನಿಮಾದ ಭಾಗವಾಗಿರುವುದಕ್ಕೆ ನಟ ಪ್ರಮೋದ್ ಮತ್ತು ಪೃಥ್ವಿ ಅಂಬರ್ ಸಂತಸ ವ್ಯಕ್ತಪಡಿಸಿದ್ದಾರೆ.
Add Asianetnews Kannada as a Preferred Source
