Asianet Suvarna News Asianet Suvarna News

ಚರ್ಮ ಕುಶಲಕರ್ಮಿಗಳ ಕುಟುಂಬಕ್ಕೆ ಡಾಲಿ ಸಾಥ್: ಶ್ರಮಜೀವಿಗಳ ಉದ್ಯಮಕ್ಕೆ ರಾಯಭಾರಿ ಧನಂಜಯ್!

ಡಾಲಿ ಧನಂಜಯ್.. ಯಾವ ಸಿನಿಮಾ ಕುಟುಂಬದ ಹಿನ್ನೆಲೆ ಇಲ್ಲದೇ ಮಿಡಲ್ ಕ್ಲಾಸ್ ಫ್ಯಾಮಿಲಿಯಿಂದ ಬಂದು ಇಂದು ಕನ್ನಡದ ಟಾಪ್ ಸ್ಟಾರ್ಗಳ ಜೊತೆ ನಿಂತಿರೋ ಸ್ಟಾರ್. ಡಾಲಿಯದ್ದು ಯಾವಾಗ್ಲು ಒಂದೇ ನಿರ್ಧಾರ. ಅದು ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ ಅನ್ನೋದು. 

ಡಾಲಿ ಧನಂಜಯ್.. ಯಾವ ಸಿನಿಮಾ ಕುಟುಂಬದ ಹಿನ್ನೆಲೆ ಇಲ್ಲದೇ ಮಿಡಲ್ ಕ್ಲಾಸ್ ಫ್ಯಾಮಿಲಿಯಿಂದ ಬಂದು ಇಂದು ಕನ್ನಡದ ಟಾಪ್ ಸ್ಟಾರ್ಗಳ ಜೊತೆ ನಿಂತಿರೋ ಸ್ಟಾರ್. ಡಾಲಿಯದ್ದು ಯಾವಾಗ್ಲು ಒಂದೇ ನಿರ್ಧಾರ. ಅದು ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ ಅನ್ನೋದು. ಡಾಲಿ ಧನಂಜಯ್ ಕನ್ನಡದಲ್ಲಿ ಮೊದಲ ಸಾಲಿನಲ್ಲಿ ನಿಲ್ಲೋ ನಟ, ಖಳನಟ, ಲಿರಿಕ್ಸ್ ರೈಟರ್, ಕಮ್ ಪ್ರೊಡ್ಯೂಸರ್. ಹೊಸಬರಿಗೆ ಹಾಗು ಟ್ಯಾಲೆಂಟ್ಸ್ಗಳನ್ನ ಹೆಚ್ಚಾಗಿ ಮೆಚ್ಚಿಕೊಳ್ಳೋ ಧನಂಜಯ್ ತಮ್ಮ ನಿರ್ಮಾಣ ಸಂಸ್ಥೆಯಿಂದ ಹಲವು ಕಲಾವಿಧರಿಗೆ ತಂತ್ರಜ್ನರಿಗೆ ಕೆಲಸ ಕೊಟ್ಟು ಹರಸಿ ಬೆಳೆಸಿದ್ದಾರೆ. ಈಗ ಧನಂಜಯ್ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಚರ್ಮ ಕುಶಲಕರ್ಮಿಗಳ ಕುಟುಂಬಕ್ಕೆ ಸಾತ್ ಕೊಟ್ಟಿದ್ದಾರೆ. ಶ್ರಮಜೀವಿಗಳ ಉಧ್ಯಮಕ್ಕೆ ರಾಯಭಾರಿ ಆಗಿದ್ದಾರೆ ಧನಂಜಯ್. 

ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ಇದೇ ಮೊದಲ ಬಾರಿಗೆ ರಾಯಭಾರಿಯನ್ನ ಆಯ್ಕೆ ಆಗಿದೆ. ನಟ‌ರಾಕ್ಷಸ ಡಾಲಿ ಧನಂಜಯ್ ಲಿಡ್ಕರ್ ಗೆ  ರಾಯಭಾರಿಯಾಗಿದ್ದಾರೆ. ಈ ಮೂಲಕ ಧನಂಜಯ್ ಜಾಹೀರಾತು ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಮೊದಲ ಬಾರಿಗೆ ಡಾಲಿ ಸರ್ಕಾರದ ಜಾಹೀರಾತಿನಲ್ಲಿ ಮಿಂಚುವ ಮೂಲಕ ಲಿಡ್ಕರ್ ಬ್ರಾಂಡ್ ಪ್ರಮೋಟ್ ಮಾಡುತ್ತಿದ್ದಾರೆ. ಲಿಡ್ಕರ್ ನಲ್ಲಿ 50 ಸಾವಿರಕ್ಕೂ ಹೆಚ್ಚು ಚರ್ಮ ಕುಶಲಕರ್ಮಿಗಳ ಕುಟುಂಬವಿದೆ. ಚರ್ಮ ಕೈಗಾರಿಕೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಮುಂದಾಗಿರುವ ರಾಜ್ಯ ಸರ್ಕಾರ  ಧನಂಜಯ್ರನ್ನ ರಾಯಾಭಾರಿಯಾಗಿ ಆಯ್ಕೆ ಮಾಡಿಕೊಂಡಿದೆ. ಈ ಮೂಲಕ ಧನಂಜಯ್ ಕುಶಲಕರ್ಮಿಗಳ ಜೀವನಕ್ಕೆ ರಾಯಭಾರಿ ಆಗಿದ್ದಾರೆ. 

Video Top Stories