ರಾಜ್‌ಕುಮಾರ್‌ ಕುಟುಂಬಕ್ಕೆ ಮತ್ತೊಂದು ಆಘಾತ: ಅಪಘಾತದಲ್ಲಿ ಕಾಲು ಕಳೆದುಕೊಂಡ ನಟ ಧ್ರುವನ್‌

ಮೈಸೂರಿನ ನಂಜನಗೂಡು ರಸ್ತೆಯಲ್ಲಿ ಪಾರ್ವತಮ್ಮ ರಾಜ್‌​ಕುಮಾರ್​ ತಮ್ಮನ ಮಗ ನಟ ಧ್ರುವನ್‌ಗೆ ಅಪಘಾತವಾಗಿದೆ.
 

First Published Jun 25, 2023, 3:05 PM IST | Last Updated Jun 25, 2023, 3:05 PM IST

ಮೈಸೂರು: ಪಾರ್ವತಮ್ಮ ರಾಜ್‌​ಕುಮಾರ್​ ತಮ್ಮನ ಮಗ ನಟ ಧ್ರುವನ್‌ಗೆ ಭೀಕರ ಅಪಘಾತದಲ್ಲಿ ​ಕಾಲಿಗೆ ಪೆಟ್ಟಾಗಿದೆ. ಟಿಪ್ಪರ್‌ ಲಾರಿ ಅವರ ಕಾಲ ಮೇಲೆ ಹರಿದ ಪರಿಣಾಮ ಕಾಲನ್ನು ಕತ್ತರಿಸಲಾಗಿದೆ. ಈ ಘಟನೆ ಮೈಸೂರಿನ ನಂಜನಗೂಡು ರಸ್ತೆಯಲ್ಲಿ ಸಂಭವಿಸಿದೆ. ತಕ್ಷಣ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾಲಿಗೆ ತೀವ್ರ ಪೆಟ್ಟಾಗಿದ್ದರಿಂದ ಬಲಗಾಲು ಕತ್ತರಿಸಲಾಗಿದೆ ಎನ್ನಲಾಗಿದೆ. ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರನ್ನು ನೋಡಲು ನಟ ಶಿವರಾಜ್‌ ಕುಮಾರ್‌ ಕುಟುಂಬ ಮೈಸೂರಿಗೆ ತೆರಳಿದೆ. ಪಾರ್ವತಮ್ಮ ಸಹೋದರ ಮೀಸೆ ಶ್ರೀನಿವಾಸ್ ಪುತ್ರ ಸೂರಜ್, ‘ಭಗವಾನ್​ ಶ್ರೀಕೃಷ್ಣ ಪರಮಾತ್ಮ’ ಸಿನಿಮಾದಲ್ಲಿ ನಟಿಸಿದ್ದರು.

ಇದನ್ನೂ ವೀಕ್ಷಿಸಿ: ಪುರಟ್ಚಿ ತಲೈವಿ ಸಮಾಧಿಗೆ ಹೋಗಿದ್ದೇಕೆ ರಚಿತಾ ರಾಮ್?: 'ಐರನ್ ಲೇಡಿ'ಬಯೋಪಿಕ್ ಮಾಡ್ತಾರಾ ನಟಿ ?

Video Top Stories