ಅಣ್ಣನ ವಿಷಯದಲ್ಲಿ ಸಿಕ್ಕಾಪಟ್ಟೆ ಎಮೋಷನಲ್ ಧ್ರುವ ಸರ್ಜಾ, ಚಿರು ಸಮಾಧಿ ಬಳಿ ಪತ್ನಿಗೆ ಸೀಮಂತ ಶಾಸ್ತ್ರ

ಧ್ರುವ ಸರ್ಜಾ ತನ್ನ ಪತ್ನಿ ಪ್ರೇರಣಾಗೆ ಸೀಮಂತ ಮಾಡಿದ್ದು ನೆಲಗುಳಿಯಲ್ಲಿರೋ ಚಿರು ಸರ್ಜಾ ಸಮಾಧಿ ಇರೋ ಜಾಗದಲ್ಲಿ. ಈ ಜಾಗಕ್ಕೆ ಹೋದ್ರೆ ಧ್ರುವನಿಗೆ ಅದೇನೋ ನೆಮ್ಮದಿ.

Share this Video
  • FB
  • Linkdin
  • Whatsapp

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಣ್ಣನ ವಿಷಯದಲ್ಲಿ ಸಿಕ್ಕಾಪಟ್ಟೆ ಎಮೋಷನಲ್. ಮೊನ್ನೆ ಅಣ್ಣನ ಸಮಾಧಿ ಪಕ್ಕದಲ್ಲಿ ನಿದ್ರಿಸಿದ್ದ ಧ್ರುವನ ವೀಡಿಯೋ ವೈರಲ್ ಅಗಿತ್ತು. ಇದನ್ನ ನೋಡಿದವರು ಧ್ರುವ ಚಿರು ಅಣ್ತಮ್ಮಂದಿರ ಬಾಂಧವ್ಯವನ್ನ ಕೊಂಡಾಡಿದ್ರು. ವಾವ್ಹ್ ರಕ್ತ ಸಂಬಂಧ ಅಂದ್ರೆ ಹಿಂಗಿರಬೇಕು ಅಂದಿದ್ರು. ಧ್ರುವ ಸರ್ಜಾ ಪತ್ನಿ ಪ್ರೇರಣಾ ಮತ್ತೊಂದು ಮಗುವಿಗೆ ಜನ್ಮ ನೀಡುತ್ತಿದ್ದಾರೆ. ಪ್ರೇರಣಾ ಇನ್ನೇನು ಮೂರ್ನಾಲ್ಕು ದಿನದಲ್ಲಿ ಮತ್ತೆ ತಾಯಿ ಆಗ್ತಾರೆ. ಹೀಗಾಗಿ ಧ್ರುವ ಸರ್ಜಾ ತನ್ನ ಮುದ್ದಿನ ಮಡದಿಗೆ ಸೀಮಂತ ಮಾಡಿದ್ದಾರೆ. ಸೀಮಂತ ಶಾಸ್ತ್ರದಲ್ಲಿ ಇಡೀ ಸರ್ಜಾ ಕುಟುಂಬ ಭಾಗಿ ಆಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಧ್ರುವ ಸರ್ಜಾ ತನ್ನ ಪತ್ನಿ ಪ್ರೇರಣಾಗೆ ಸೀಮಂತ ಮಾಡಿದ್ದು ನೆಲಗುಳಿಯಲ್ಲಿರೋ ಚಿರು ಸರ್ಜಾ ಸಮಾಧಿ ಇರೋ ಜಾಗದಲ್ಲಿ. ಈ ಜಾಗಕ್ಕೆ ಹೋದ್ರೆ ಧ್ರುವನಿಗೆ ಅದೇನೋ ನೆಮ್ಮದಿ. ತನ್ನಣ್ಣ ಜೊತೆಗಿದ್ದಾನೆ ಅನ್ನೋ ಭಾವ. ಹೀಗಾಗೆ ಧ್ರುವ ಪ್ರೇರಣಾ ಸೀಮಂತವನ್ನ ಇಲ್ಲೇ ಮಾಡಿದ್ದು ಮತ್ತೆ ಚಿರು ಆಗಮನಕ್ಕೆ ಇಡೀ ಸರ್ಜಾ ಕುಟುಂಬ ಕಾಯುತ್ತಿದೆ ಅಂತ ಹೇಳಿದ್ದಾರೆ. 

Related Video