ಬೆಂಗಳೂರು ಬಿಡುವ ಡಿಸೈಡ್ ಮಾಡಿದ್ದಾರೆ ಧ್ರುವ ಸರ್ಜಾ, ಎಲ್ಲಿಗೆ ಶಿಫ್ಟ್ ಆಗ್ತಾರೆ.?

ಇಷ್ಟು ದಿನ ಬೆಂಗಳೂರಿನ ಕೆ. ಆರ್ ರೋಡ್ ಬಳಿ ಇರೋ ತ್ಯಾಗರಾಜನಗರದಲ್ಲಿದ್ದ ಧ್ರುವ ಸರ್ಜಾ ಇದ್ದಕ್ಕಿದ್ದಂತೆ ಈಗ ಬೆಂಗಳೂರು ಬಿಡುವ ಡಿಸೈಡ್ ಮಾಡಿದ್ದಾರೆ. ಧ್ರುವ ಬೆಂಗಳೂರು ಬಿಡೋಕು ಕಾರಣ ಇದೆ‌. 

Share this Video
  • FB
  • Linkdin
  • Whatsapp

ಇಷ್ಟು ದಿನ ಬೆಂಗಳೂರಿನ ಕೆ. ಆರ್ ರೋಡ್ ಬಳಿ ಇರೋ ತ್ಯಾಗರಾಜನಗರದಲ್ಲಿದ್ದ ಧ್ರುವ ಸರ್ಜಾ ಇದ್ದಕ್ಕಿದ್ದಂತೆ ಈಗ ಬೆಂಗಳೂರು ಬಿಡುವ ಡಿಸೈಡ್ ಮಾಡಿದ್ದಾರೆ. ಧ್ರುವ ಬೆಂಗಳೂರು ಬಿಡೋಕು ಕಾರಣ ಇದೆ‌. ಧ್ರುವ ಸೆಟಲ್ ಆಗ್ತಿರೋ ಜಾಗಕ್ಕೂ ಒಂದು ಎಮೋಷನಲ್ ಲಿಂಕ್ ಇದೆ. ಆಕ್ಷನ್ ಪ್ರಿನ್ಸ್ ಬೆಂಗಳೂರು ಬಿಟ್ಟು ಕನಕಪುರದ ನೆಲಗುಳಿಯಲ್ಲಿರೋ ಬೃಂದಾವನ ಫಾರ್ಮ್‌ ಹೌಸ್‌ಗೆ ಶಿಫ್ಟ್ ಆಗಲಿದ್ದಾರಂತೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಧ್ರುವ ಅರ್ಧ ಜೀವದಂತಿದ್ದ ಚಿರು ಸರ್ಜಾ ಹೃದಯಾಘಾತದಿಂದ ನಿಧನ ಆದ ಮೇಲೆ ಅವರ ಅಂತ್ಯಕ್ರಿಯೆ ನೆಲಗುಳಿಯಲ್ಲಿರೋ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಮಾಡಿದ್ದಾರೆ. ಈಗ ಅಣ್ಣನ ಸಮಾಧಿಯನ್ನ ಅಮೃತಶಿಲೆಯಿಂದ ಕಟ್ಟಿಸಿರೋ‌ ಆಕ್ಷನ್ ಪ್ರಿನ್ಸ್ ತನ್ನ ಜೀವದ ಅಣ್ಣನ ಅರಮನೆ ಸುತ್ತ ಇರೋ ಪ್ಲಾನ್ ಮಾಡಿದ್ದಾರಂತೆ. 

ಫಾರ್ಮ್ ಹೌಸ್ ನಲ್ಲಿ ಸುಂದರ ತೋಟ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ತನ್ನ ಜೀವನವನ್ನ ತನ್ನ ಕುಟುಂಬದ ಜೊತೆ ಇಲ್ಲಿಯೇ ಕಳೆಯುವ ಪ್ಲಾನ್ ಧ್ರುವ ಮಾಡಿದ್ದಾರೆ ಅಂತ ಅವರ ಆಪ್ತ ಬಳಗ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಹೇಳಿದ್ದಾರೆ. ವಾರದಲ್ಲಿ ಎರಡು ದಿನ ಬೆಂಗಳೂರಿನಲ್ಲಿ ಕೆಲಸ ಮಾಡಿ ಉಳಿದ ದಿನ ತಂಪಾದ ಬೃಂದಾವನ ಫಾರ್ಮ್ ಹೌಸ್ನಲ್ಲಿ ಕಾಲ ಕಳೆಯಲಿದ್ದಾರಂತೆ‌. ಈ ಫಾರ್ಮ್ ಹೌಸ್ ನಲ್ಲಿದ್ದ ಮನೆಯನ್ನ ಮರು ನಿರ್ಮಾಣ ಮಾಡೋ ಕೆಲಸ ಕೂಡ‌ ನಡೆಯುತ್ತಿದೆ. 

Related Video