ಡಿಂಪಲ್ ಡಿಂಪಲ್‌ ಕಾಣುತ್ತಾ ಅಂತ ರಚಿತಾ ಮನೆ ಮುಂದೆ ನಾವೆಲ್ಲಾ ಬೀಟ್ ಹಾಕ್ತಿದ್ವಿ: ಧನಂಜಯ್

ಕತ್ರಿಗುಪ್ಪೆಯಲ್ಲಿ ರಚಿತಾ ಇದ್ರು. ರಚಿತಾ ಮನೆ ಮುಂದೆ ನಾವೆಲ್ಲಾ ಬೀಟ್ ಹಾಕ್ತಿದ್ವಿ. ಆಗ ಡಿಂಪಲ್ ಡಿಂಪಲ್‌ ಕಾಣುತ್ತಾ ಅಂತ ಮನೆ ಮುಂದೆ ಬೀಟ್ ಹಾಕ್ತಿದ್ವಿ.  ಅವರ ಕಣ್ಣುಗಳು ಪಳ ಪಳ ಅಂತ ಹೊಳೀತಾ ಇರುತ್ತೆ ಎಂದು ಡಾಲಿ ಧನಂಜಯ್ ಹೇಳಿದರು. 

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ನಲ್ಲಿ ರಿಲೀಸ್‌ಗೆ ರೆಡಿಯಾಗಿರುವ ಬಹುನಿರೀಕ್ಷೆಯ ಸಿನಿಮಾ ಮಾನ್ಸೂನ್ ರಾಗ. ಡಾಲಿ ಧನಂಜಯ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿಯಾಗಿ ಬರ್ತಿರುವ ಮೊದಲ ಸಿನಿಮಾ. ಈಗಾಗಲೇ ಹಾಡು ಮತ್ತು ಟ್ರೈಲರ್ ಮೂಲಕ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿರುವ ಮಾನ್ಸೂನ್ ರಾಗ ಸಿನಿಮಾವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾ ರಿಲೀಸ್‌ಗೂ ಮೊದಲೇ ಸಿನಿಮಾತಂಡ ಬೆಂಗಳೂರಿನಲ್ಲಿ ಪ್ರಿ ರಿಲೀಸ್ ಈವೆಂಟನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಇಡೀ ಸಿನಿಮಾತಂಡ ಹಾಜರಾಗಿತ್ತು. ವಿಶೇಷ ಅತಿಥಿಯಾಗಿ ದುನಿಯಾ ವಿಜಯ್ ಆಗಮಿಸಿದ್ದರು. ನಟಿ ಸುಹಾಸಿನಿ, ಡಾಲಿ ಧನಂಜಯ್, ರಚಿತಾ ರಾಮ್, ಅಚ್ಯುತ್‌ ಕುಮಾರ್, ಯಶ ಶಿವಕುಮಾರ್ ಸೇರಿದಂತೆ ಇಡಿ ತಂಡ ಹಾಜರಾಗಿತ್ತು. ರವೀಂದ್ರ ನಾಥ್ ನಿರ್ದೇಶನದಲ್ಲಿ ಮೂಡಿಬಂದ ಮನ್ಸೂನ್ ರಾಗ ಸಿನಿಮಾ ಇದೇ ತಿಂಗಳು 16ರಂದು ರಿಲೀಸ್ ಆಗುತ್ತಿದೆ. ಪ್ರೀ ರಿಲೀಸ್ ಈವೆಂಟ್‌‌ನಲ್ಲಿ ಮಾತನಾಡಿದ ಡಾಲಿ ಧನಂಜಯ್ ಮಾನ್ಸೂನ್ ರಾಗ ತುಂಬಾ ನೆನಪುಗಳನ್ನ ಕೊಟ್ಟಿದೆ. ಕತ್ರಿಗುಪ್ಪೆಯಲ್ಲಿ ರಚಿತಾ ಇದ್ರು. ರಚಿತಾ ಮನೆ ಮುಂದೆ ನಾವೆಲ್ಲಾ ಬೀಟ್ ಹಾಕ್ತಿದ್ವಿ. ಆಗ ಡಿಂಪಲ್ ಡಿಂಪಲ್‌ ಕಾಣುತ್ತಾ ಅಂತ ಮನೆ ಮುಂದೆ ಬೀಟ್ ಹಾಕ್ತಿದ್ವಿ. ಅವರ ಕಣ್ಣುಗಳು ಪಳ ಪಳ ಅಂತ ಹೊಳೀತಾ ಇರುತ್ತೆ ಎಂದು ಹೇಳಿದರು. ಜೊತೆಗೆ ಭಗವಂತ ಮತ್ತೆ ನನಗೆ ಜನ್ಮ ಕೊಟ್ರೆ ಸುಹಾಸಿನಿ ಮೇಡಂ ಜೊತೆ ವಿಷ್ಣು ಸರ್ ಬಂಧನ ಪಾತ್ರ ಮಾಡ್ತೀನಿ ಎಂದರು.

Add Asianetnews Kannada as a Preferred SourcegooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video