ಡಾರ್ಲಿಂಗ್ ಕೃಷ್ಣ ಅಪ್ಪು ಸರ್ ಜೊತೆ ಮೊದಲ ಭೇಟಿ ಸ್ಮರಿಸಿಕೊಂಡಿದ್ದು ಹೀಗೆ...
ನಾನು ಹತ್ತಿರುವ ದೊಡ್ಡ ವೇದಿಕೆ ಇದು. ಈ ವೇದಿಕೆ ಮೇಲಿರುವ ಎಲ್ಲರೂ ನನ್ನ ಸಿನಿ ಕೆರಿಯರ್ಗೆ ಸಹಾಯ ಮಾಡಿದ್ದಾರೆ. ಜೋಗಯ್ಯ ಸಿನಿಮಾದ ಕಾರ್ಯಕ್ರಮದಲ್ಲಿ ಅಪ್ಪು ಸರ್ ನನ್ನ ಜತೆಗೆ ಟೈಮ್ ಕಳೆದರು. ನಾನು ಆಗ ಅವರ ಜೊತೆ ಜಿಮ್ ಮಾಡುತ್ತಿದ್ದೆ ಅಷ್ಟೇ ಎಂದು ಪುನೀತ್ ರಾಜ್ಕುಮಾರ್ ಬಗ್ಗೆ ನಟ ಡಾರ್ಲಿಂಗ್ ಕೃಷ್ಣ ತಿಳಿಸಿದರು.
'ಲಕ್ಕಿಮ್ಯಾನ್' ಸಿನಿಮಾವು ಸೆ.9ರಂದು ತೆರೆಕಾಣುತ್ತಿದೆ. ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ವಿಶೇಷ ಪಾತ್ರ ಮಾಡಿದ್ದಾರೆ. ಈ ಬಗ್ಗೆ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಡಾರ್ಲಿಂಗ್ ಕೃಷ್ಣ, ನಾನು ಹತ್ತಿರುವ ದೊಡ್ಡ ವೇದಿಕೆ ಇದು. ಈ ವೇದಿಕೆ ಮೇಲಿರುವ ಎಲ್ಲರೂ ನನ್ನ ಸಿನಿ ಕೆರಿಯರ್ಗೆ ಸಹಾಯ ಮಾಡಿದ್ದಾರೆ. ಜೋಗಯ್ಯ ಸಿನಿಮಾದ ಕಾರ್ಯಕ್ರಮದಲ್ಲಿ ಅಪ್ಪು ಸರ್ ನನ್ನ ಜತೆಗೆ ಟೈಮ್ ಕಳೆದರು. ನಾನು ಆಗ ಅವರ ಜೊತೆ ಜಿಮ್ ಮಾಡುತ್ತಿದ್ದೆ ಅಷ್ಟೇ. ಆದರೆ ಆಗಿನಿಂದಲೇ ಫ್ರೆಂಡ್ ಇದಾನೆ ಅಂತ ಅವರು ನನಗೆ ಕಂಫರ್ಟ್ ನೀಡಿದರು. ಜಾಕಿ, ಹುಡುಗರು, ದೊಡ್ಮನೆ ಹುಡ್ಗ ಸಿನಿಮಾದಲ್ಲಿ ನಾನು ಕೆಲಸ ಮಾಡಿದ್ದೆ. ಒಮ್ಮೆ ನನಗೆ ತಮಿಳು ಸಿನಿಮಾದ ಆಫರ್ ಸಿಕ್ಕಿತ್ತು. ಆದರೆ ಅಲ್ಲಿ ಆಗಿದ್ದೇ ಬೇರೆ. ಆಗ ಮೂಗೂರು ಸುಂದರಂ ಅವರ ಸಹಾಯ ಸಿಕ್ಕಿತ್ತು. ನಾನು ನಿರ್ದೇಶಕ ಆಗಬೇಕು ಅಂದಾಗ ಸುದೀಪ್ ಸರ್ ಸಪೋರ್ಟ್ ಮಾಡಿದ ಬಗ್ಗೆ ಡಾರ್ಲಿಂಗ್ ಕೃಷ್ಣ ಹೇಳಿದರು.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment