ಬ್ಯೂಟಿ ಜೊತೆ ಉಪಾಧ್ಯಕ್ಷರ ಮಸ್ತ್ ರೊಮ್ಯಾನ್ಸ್: ಈ ಸಿನಿಮಾದ ರೊಮ್ಯಾಂಟಿಕ್ ಸಾಂಗ್ ರಿಲೀಸ್

ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದು ಅನ್ನೋ ಮಾತಿದೆ. ಆದರೆ ಸ್ಯಾಂಡಲ್ ವುಡ್ ನ ಕಾಮಿಡಿ ಉಪಾಧ್ಯಕ್ಷ ಚಿಕ್ಕಣ್ಣನ ವಿಷಯದಲ್ಲಿ ಆ ಮಾತನ್ನ ಸ್ವಲ್ಪ ಚೇಂಜ್ ಮಾಡಿ ಹೇಳೋದಾದ್ರೆ ಮೂರ್ತಿನೂ ದೊಡ್ಡದು ಕೀರ್ತಿನೂ ದೊಡ್ಡದು.

Share this Video
  • FB
  • Linkdin
  • Whatsapp

ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದು ಅನ್ನೋ ಮಾತಿದೆ. ಆದರೆ ಸ್ಯಾಂಡಲ್ ವುಡ್ ನ ಕಾಮಿಡಿ ಉಪಾಧ್ಯಕ್ಷ ಚಿಕ್ಕಣ್ಣನ ವಿಷಯದಲ್ಲಿ ಆ ಮಾತನ್ನ ಸ್ವಲ್ಪ ಚೇಂಜ್ ಮಾಡಿ ಹೇಳೋದಾದ್ರೆ ಮೂರ್ತಿನೂ ದೊಡ್ಡದು ಕೀರ್ತಿನೂ ದೊಡ್ಡದು. ಯಾಕಂದ್ರೆ ಚಿಕ್ಕಣ್ಣ ಆರಡಿ ಎತ್ತರದ ಕಾಮಾಡಿ ಸ್ಟಾರ್. ಆದ್ರೆ ಈಗ ಹೀರೋ.. ನಾಯಕ. ಅದು ಉಪಾಧ್ಯಕ್ಷ ಸಿನಿಮಾದಿಂದ. ಕಾಮಿಡಿ‌ ಕಿಂಗ್ ಚಿಕ್ಕಣ್ಣ ಹೀರೋ ಆಗಿ ಡೆಬ್ಯೂ ಆಗ್ತಿರೋ ಸಿನಿಮಾ ಉಪಾಧ್ಯಕ್ಷ. ಈ ಸಿನಿಮಾದಲ್ಲಿ ಶರಣ್ ರೊಮ್ಯಾಂಟಿಕ್ ಲವರ್ ಬಾಯ್. ಬ್ಯೂಟಿ ಹಿಂದೆ ಪ್ರೀತ್ಸೆ ಪ್ರೀತ್ಸೆ ಅಂತ ಹಿಂದೆ ಬೀಳೋ ಕಟ್ಟಾ ಪ್ರೇಮಿ.. ಇದಕ್ಕೆ ಸಾಕ್ಷಿ ಉಪಾಧ್ಯಕ್ಷನ ಈ ರೊಮ್ಯಾಂಟಿಕ್ ಸಾಂಗ್ ಉಪಾಧ್ಯಕ್ಷ ಪಕ್ಕಾ ಕಾಮಿಡಿ ಎಂಟರ್ ಟೈನ್ಮೆಂಟ್ ಸಿನಿಮಾ. ಈ ಸಿನಿಮಾದಲ್ಲಿ ಚಿಕ್ಕಣ್ಣ ನಟಿ ಮಲೈಕಾ ಜೊತೆ ಡುಯೆಟ್ ಹಾಡಿದ್ದಾರೆ. ಅರ್ಜುನ್ ಜನ್ಯ ಮ್ಯೂಸಿಕ್ ನಲ್ಲಿ ಈ ಹಾಡು ಮೂಡಿ ಬಂದಿದೆ. ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳಿರೋ ಚಿತ್ರಕ್ಕೆ ಸ್ಮಿತಾ ಉಪಾಪತಿ ಬಂಡವಾಳ ಹೂಡಿದ್ದಾರೆ. ಡಿಸೆಂಬರ್ 1 ಅಥವ 10 ನೇ ತಾರೀಖು ಉಪಾಧ್ಯಕ್ಷ ತೆರೆ ಮೇಲೆ ಬರಲಿದೆ.

Related Video