ಫಿಕ್ಸ್ ಆಯ್ತು ಬ್ಯಾಡ್‌ಮ್ಯಾನರ್ಸ್ ರಿಲೀಸ್ ಡೇಟ್! ಬಾಕ್ಸಾಫೀಸ್ ಬೇಟೆಗೆ ಬರ್ತಿದ್ದಾನೆ ಯಂಗ್ ರೆಬೆಲ್!
ಸೂರಿ ಅಡ್ಡಾದಲ್ಲಿ ‘ಬ್ಯಾಡ್ ಮ್ಯಾನರ್ಸ್’ ರೆಬೆಲಿಸಂ ಶುರುವಾಗಿದೆ. ಥಿಯೇಟರ್‌ಲಿ ನೀವೆಲ್ಲಾ ಅಭಿಷೇಕ್ ಅಂಬರೀಷ್ರನ್ನ ಖಡಕ್ ಪೋಲೀಸ್ ಆಫೀಸರ್ ಆಗಿ ನೋಡೊ ದಿನ ಹತ್ತಿರವಾಗಿದೆ. ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಓಗ ಓಗ ಹಾಡಾಡುತ್ತಿದ್ದ ಫ್ಯಾನ್ಸ್ ಈಗ ಬರ್ತೀವಿ ಥಿಯೇಟರ್ಗೆ ನೋಡಾ ಅಂತಿದ್ದಾರೆ.
ದುನಿಯಾ ,ಜಾಕಿ, ಅಣ್ಣಾಬಾಂಡ್ , ಇಂತಿ ನಿನ್ನ ಪ್ರೀತಿಯ, ಕೆಂಡ ಸಂಪಿಗೆ ಕಡ್ಡೀಪುಡಿಯಂತಹ ಬ್ಲಾಖ್ ಬಸ್ಟರ್ ಸಿನಿಮಾಗಳನ್ನ ಕೊಟ್ಟ ಮಾಸ್ ಕ್ಲಾಸ್ ಮಿಕ್ಸ್ ಡೈರೆಕ್ಟರ್ “ಸೂರಿ” ಈ ಬಾರಿ ಅಭಿಷೇಕ್ ಅಂಬರೀಷ್ರನ್ನು(Abishek Ambareesh) ಫುಲ್ ಕಮರ್ಷಿಯಲ್ಲಾಗಿ ತೋರಿಸೋಕೆ ಸಜ್ಜಾಗಿದ್ದಾರೆ. ಯಂಗ್ ರೆಬೆಲ್ ಸ್ಟಾರ್ “ಅಭಿಷೇಕ್ ಅಂಬರೀಶ್”ಸೂರಿ Mega ಕಾಂಬಿನೇಷನ್ ನ “BAD MANNERS “ಚಿತ್ರ ನವೆಂಬರ್ 24 / 2023 ರಂದು ಶುಕ್ರವಾರ ಕರ್ನಾಟಕ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುವ ಬಿಗ್ ನ್ಯೂಸ್‌ನ ಇದೀಗ ಚಿತ್ರತಮಡ ಅನೌನ್ಸ್ ಮಾಡಿದೆ. 'ಅಮರ್’ ಚಿತ್ರದ ಮೂಲಕ ಅಭಿಷೇಕ್ ಅಂಬರೀಷ್ ಚಿತ್ರರಂಗಕ್ಕೆ ಕಾಲಿಟ್ಟರು. ಮೊದಲ ಸಿನಿಮಾದಲ್ಲಿ ಅವರಿಗೆ ನಾಗಶೇಖರ್ ನಿರ್ದೇಶನ ಮಾಡಿದ್ದರು. ಆ ಚಿತ್ರದ ಹಾಡುಗಳು ಸೂಪರ್ ಹಿಟ್ ಆದವು. ಈಗ ‘ಬ್ಯಾಡ್ ಮ್ಯಾನರ್ಸ್’(Bad Manners) ಬರುತ್ತಿದೆ. ಸಮಾಜವನ್ನು ಕ್ಲೀನ್ ಮಾಡಲು ಪೊಲೀಸ್ ಅಧಿಕಾರಿಗಳಿಗೆ 'ಬ್ಯಾಡ್ ಮ್ಯಾನರ್ಸ್' ಇದ್ದರೆ ಮಾತ್ರ ಸಾಧ್ಯ ಎನ್ನುತ್ತಿದ್ದಾರೆ ನಿರ್ದೇಶಕ ಸೂರಿ. ಸಿನಿಮಾದ ಟೀಸರ್ ಮತ್ತು ಬಿಡುಗಡೆಯಾಗಿರೋ 2ಹಾಡುಗಳು ಈಗ ಬಿಗ್ಗೆಸ್ಟ್ ಹಿಟ್ಟಾಗಿವೆ. ರಚಿತಾ, ಅಭಿಷೇಕ್ ಜೋಡಿಯಾಗಿದ್ದಾರೆ.'ಸಾಕಷ್ಟು ಜನ ಅಭಿ ಅವರಲ್ಲಿ ಅಂಬರೀಶ್ ಅವರನ್ನು ಕಾಣುತ್ತಿದ್ದಾರೆ. ಅದರಲ್ಲಿ ಆಶ್ಚರ್ಯ ಪಡುವಂತಹದ್ದೇನೂ ಇಲ್ಲ. ಅಭಿಗೆ ಅವರ ತಂದೆಯ ಧ್ವನಿ, ಕಣ್ಣು, ಜನರನ್ನು ಪ್ರೀತಿಸುವ ರೀತಿ ಮತ್ತು ತನ್ನ ಸುತ್ತಲಿರುವವರಿಗೆ ಊಟದ ವ್ಯವಸ್ಥೆ ಮಾಡುವುದು ಹೀಗೆ ಹಲವು ಅವರ ತಂದೆಯ ಗುಣಗಳು ಬಂದಿವೆ. ಸಿನಿಮಾದಲ್ಲಿ ಹಲವು ಬಾರಿ ಅವರನ್ನೇ ನೋಡುತ್ತಿದ್ದೇವೆ ಎನಿಸುತ್ತದೆ' ಎನ್ನುತ್ತಿದ್ದಾರೆ ಸಾಂಗು ಟೀಸರ್ ನೋಡಿದ ಅವರ ಫ್ಯಾನ್ಸ್. ಬ್ಯಾಡ್ ಮ್ಯಾನರ್ಸ್ ನ.24ಕ್ಕೆ ರಿಲೀಸ್ ಆಗುತ್ತಿದ್ದು ಚರಣ್ ರಾಜ್ ಸಂಗೀತ ಸಿನಿಮಾಗಿದೆ. ರಿಲೀಸ್ ಡೇಟ್ ಅನೌನ್ಸ್ ಆಗಿದ್ದು ಇದೀಗ ಅಂಬಿ ಅಭಿಮಾನಿಗಳಿಗೆ ಬಿಗ್ ಹಬ್ಬವಾಗಿದೆ. ಸುದೀರ್ ಸಿನಿಮಾವನ್ನು ನಿರ್ಮಾಣಮಾಡಿದ್ದಾರೆ ಇನ್ನು ಅಭಿಷೇಕ್ ಬ್ಯಾಡ್ ಮ್ಯಾನರ್ಸ್ ನಂತರ ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನದ ಹೊಸ ಚಿತ್ರವನ್ನು ಕೂಡ ಅಭಿಷೇಕ್ ಒಪ್ಪಿಕೊಂಡಿದ್ದಾರೆ. ಕೃಷ್ಣ ನಿರ್ದೇಶನ ಮಾಡಲಿರುವ ‘ಕಾಳಿ’ ಚಿತ್ರಕ್ಕೂ ಅಭಿಷೇಕ್ ಹೀರೋ ಆಗಿದ್ದಾರೆ.
ಇದನ್ನೂ ವೀಕ್ಷಿಸಿ: ಡಂಪಿಗ್ ಯಾರ್ಡ್ ಆಗಿ ಬದಲಾಗ್ತಿದ್ಯಾ ಅಂಡರ್ ಪಾಸ್? ಕಾಮಗಾರಿ ಪೂರ್ಣಗೊಳಿಸುವಂತೆ ಜನರ ಆಗ್ರಹ