Asianet Suvarna News Asianet Suvarna News

ಡಂಪಿಗ್ ಯಾರ್ಡ್ ಆಗಿ ಬದಲಾಗ್ತಿದ್ಯಾ ಅಂಡರ್ ಪಾಸ್? ಕಾಮಗಾರಿ ಪೂರ್ಣಗೊಳಿಸುವಂತೆ ಜನರ ಆಗ್ರಹ

ಆ ಅಂಡರ್ ಪಾಸ್ ಸ್ಟಾಪ್ ಆಗಿ ಬರೋಬ್ಬರಿ ಆರೇಳು ವರ್ಷಗಳೇ ಕಳೆದವು. ಅತ್ತ ಅಂಡರ್ ಪಾಸ್ ಅಂತೂ ಓಪನ್ ಆಗಿಲ್ಲ. ಸದ್ಯ ಈ ಅಂಡರ್ ಪಾಸ್ ಡಂಪಿಗ್ ಯಾರ್ಡ್ ಆಗಿ ಬದಲಾಗುವ ಲಕ್ಷಣಗಳು ಗೋಚರಿಸುತ್ತಿವೆ. ಹಾಗಾದ್ರೆ ಈ ಅಂಡರ್ ಪಾಸ್ ಯಾವುದು? ಅಷ್ಟಕ್ಕೂ ಇದು ನಿಂತಿದ್ಯಾಕೆ ಅಂತೀರಾ? ಈ ಸ್ಟೋರಿ ನೋಡಿ.

ಕಾಮಗಾರಿ ಸ್ಟಾಪ್ ಆಗಿ ವರ್ಷಗಳೇ ಕಳೆದಿರುವ ಅಂಡರ್ ಪಾಸ್. ಇನ್ನೊಂದು ಬದಿಯಲ್ಲಿ ಅಂಡರ್ ಪಾಸ್ ಗೆ ಅಡ್ಡಲಾಗಿರುವ ಗೋಡೆ. ಇದರ ನಡುವೆ ಕಸದ ರಾಶಿ. ಇದು ಬೆಂಗಳೂರಿನ(Bengaluru) ಕಂಠೀರವ ಸ್ಟುಡಿಯೋ(Kanteerava Studio) ಬಳಿ ಅರ್ಧಕ್ಕೇ ಕಾಮಗಾರಿ ನಿಲ್ಲಿಸಿರು ಅಂಡರ್ ಪಾಸ್ ಬಳಿ ಕಂಡುಬರುವ ದೃಶ್ಯಗಳು. ಐಟಿ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಕಂಟ್ರೋಲ್ಗಾಗಿ ಫ್ಲೈ ಓವರ್, ಅಂಡರ್ ಪಾಸ್(Underpass) ನಿರ್ಮಾಣವಾಗ್ತಿವೆ. ಆದ್ರೆ, ನಂದಿನಿ ಲೇಔಟ್ ಮತ್ತು ಪೀಣ್ಯ ನಡುವೆ ಸಂಪರ್ಕ ಕಲ್ಪಿಸಲು 2014 ರ ಪ್ರಾರಂಭಗೊಂಡಿದ್ದ ಈ ಅಂಡರ್ ಪಾಸ್ ಮಾತ್ರ ಇನ್ನೂ ಮುಗಿದಿಲ್ಲ. ಇದಕ್ಕೆ ಕಾರಣ ಆಗಿನ ಲ್ಯಾಂಡ್ ಅಕ್ವೇಸೀಷನ್ನಲ್ಲಿ ಉಂಟಾದ  ಕೆಲವು ಅಡೆತಡೆಗಳು. ಇದರಿಂದ ಕಾಮಗಾರಿ ಆರಂಭಿಸಿದ್ದ ಬಿಡಿಎ ಅರ್ಧಕ್ಕೇ ನಿಲ್ಲಿಸಿ ಗೋಡೆ ನಿಲ್ಲಿಸಲಾಗಿತ್ತು. ಸದ್ಯ ಈ ಅಂಡರ್ ಪಾಸ್‌ಗೆ ಸಂಬಂಧಿಸಿದ ಲ್ಯಾಂಡ್ ಸಮಸ್ಯೆ ಬಗೆಹರಿದಿದೆ. ಆದ್ರೆ ಕೆಲಸ ಮಾತ್ರ ಮುಂದುವರೆದಿಲ್ಲ. ಹೀಗಾಗಿ ಅರ್ಧಂಬರ್ಧ ಕಾಮಗಾರಿಯಾಗಿರೋ ಅಂಡರ್ ಪಾಸ್ ಪುಂಡ ಪೋಕರಿಗಳ ಅಡ್ಡೆಯಾಗಿದೆ. ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಈ ಪ್ರದೇಶದಲ್ಲಿ ಓಡಾಡೋಕು ಭಯವಾಗುತ್ತಿದೆ ಎನ್ನುತ್ತಿದ್ದಾರೆ ಸ್ಥಳೀಯರು. ಪುಂಡ ಪೋಕರಿಗಳ ಭಯ ಒಂದು ಕಡೆಯಾದ್ರೆ, ಕಸದ ಸಮಸ್ಯೆ ಮತ್ತೊಂದ್ಕಡೆ. ಅಂಡರ್‌ಪಾಸ್ ಬಳಿ ರಾಶಿ ರಾಶಿ ಕಸ ಸುರಿಯುತ್ತಿದ್ದು, ಡಂಪಿಂಗ್ ಯಾರ್ಡ್ ಆಗಿ ಮಾರ್ಪಟ್ಟಿದೆ. ಮೂಗು ಮುಚ್ಚಿಕೊಂಡೇ ಜನ ಓಡಾಡುವ ಪರಿಸ್ಥಿತಿ ಎದುರಾಗಿದೆ. 

ಇದನ್ನೂ ವೀಕ್ಷಿಸಿ:  ಕಡಲ ನಗರಿಯಲ್ಲಿ ಹೆಚ್ಚಾಯ್ತು ಮರಳಿನ ಸಮಸ್ಯೆ: ಕೃತಕ ಅಭಾವಕ್ಕೆ ಗುತ್ತಿಗೆದಾರರು ಕಂಗಾಲು

Video Top Stories