ಬ್ಲಡ್ ಶೇಡ್ ನಲ್ಲಿ ಯಂಗ್ ರೆಬಲ್, ಮೇಕಪ್ ಗಾಗಿ 4 ಗಂಟೆ ಕೂತಲ್ಲೇ ಕೂತಿದ್ದ ಅಭಿಷೇಕ್..!

ಜ್ಯೂ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ (Abhishek Ambareesh) ಈಗ ಸಿನಿಮಾಗಳಲ್ಲಿಯೇ ಬ್ಯುಸಿ ಆಗಿದ್ದಾರೆ. ಸದ್ಯ ಬ್ಯಾಡ್ ಮ್ಯಾನರ್ಸ್ ಚಿತ್ರೀಕರಣದಲ್ಲಿರೋ ಅಭಿಷೇಕ್ ಇದಾದ ನಂತ್ರ ಎರಡು ಚಿತ್ರಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ

Share this Video
  • FB
  • Linkdin
  • Whatsapp

ಜ್ಯೂ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ (Abhishek Ambareesh) ಈಗ ಸಿನಿಮಾಗಳಲ್ಲಿಯೇ ಬ್ಯುಸಿ ಆಗಿದ್ದಾರೆ. ಸದ್ಯ ಬ್ಯಾಡ್ ಮ್ಯಾನರ್ಸ್ ಚಿತ್ರೀಕರಣದಲ್ಲಿರೋ ಅಭಿಷೇಕ್ ಇದಾದ ನಂತ್ರ ಎರಡು ಚಿತ್ರಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದ್ರಲ್ಲಿ ಒಂದು ಚಿತ್ರಕ್ಕೆ ನಿರ್ದೇಶಕ ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದು ಆ ಚಿತ್ರ ಇಂಟ್ರೆಸ್ಟಿಂಗ್ ಆಗಿರೋ ಪೋಸ್ಟರ್ ಅನ್ನು ರಿವಿಲ್ ಮಾಡಿದ್ದಾರೆ. ಪೋಸ್ಟರ್ ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು ಅದ್ರ ಹಿಂದಿರೋ ಸ್ಟೋರಿ ಕೂಡ ಅಷ್ಟೇ ಇಂಟ್ರೆಸ್ಟಿಂಗ್ ಆಗಿದೆ.

Exclusive Making: ರಕ್ಕಮ್ಮನ ಹಾಡಿಗೆ ಜಾಕ್ವೆಲಿನ್ ಡ್ಯಾನ್ಸ್ ಪ್ರಾಕ್ಟೀಸ್ ಹೇಗಿತ್ತು ಗೊತ್ತಾ?

ಸಿನಿಮಾ ಮೇಕಪ್ ಅಂದ್ರೆ ಸುಮ್ಮನೆ ಅಲ್ಲ, ಅದಕ್ಕೂ ಶ್ರಮ ಇರುತ್ತೆ ..ನಟರ ಶ್ರಧ್ಧೆ ಹಾಗೂ ತಾಳ್ಮೆ ಮುಖ್ಯವಾಗಿ ಬೇಕಾಗಿರುತ್ತೆ.ಇಲ್ಲೂ ಅಷ್ಟೇ ಅಭಿಷೇಕ್ ಮುಖದಮೇಲೆ ಈ ರೀತಿ ಮೇಕಪ್ ಕೂರಿಸಲು ನಾಲ್ಕು ಗಂಟೆ ಬೇಕಾಯ್ತಂತೆ. ಅಭಿಷೇಕ್ ಕೂಡ ನಾಲ್ಕು ಗಂಟೆಗಳ ಕಾಲ ಕೂತಲ್ಲೇ ಕೂತು ಮೇಕಪ್ ಮಾಡಿಸಿಕೊಂಡಿದ್ದಾರೆ.

ಮೇಕಪ್ ಆರ್ಟಿಸ್ಟ್ ಬಾಷಾ ಸುಮಾರು 35 ವರ್ಷಗಳಿಂದ ಸಿನಿಮಾರಂಗದಲ್ಲಿ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ...ಅಂಬಿ ಸಿನಿಮಾಗಳಿಗೂ ಮೇಕಪ್ ಮಾಡಿರೋ ಇವ್ರು ಅಭಿಷೇಕ್ ಅವ್ರಿಗೆ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು..ಅದ್ಬುತವಾಗಿ ಮೇಕಪ್ ಮಾಡಿದ್ರಿಂದ ಅಭಿ ಅವ್ರಿಗೆ ಚಿಕ್ಕ ಗಿಫ್ಟ್ ಕೊಟ್ಟಿದ್ದಾರೆ.

Related Video