ಲಾಲ್‌ಬಾಗ್‌ನಲ್ಲಿ ಅಪ್ಪು ಕರಾಮತ್ತು: ಪ್ಲವರ್‌ ಶೋಗೆ 9 ಲಕ್ಷ ಮಂದಿ ಭೇಟಿ, 3.5 ಕೋಟಿ ಆದಾಯ!

ಈ ಬಾರಿಯ ಸ್ವಾತಂತ್ರ ದಿನಾಚರಣೆ ಸಲುವಾಗಿ ಆಯೋಜಿಸಿದ್ದ ಲಾಲ್‌ಭಾಗ್ ಫಲಪುಷ್ಪ ಪ್ರದರ್ಶನಕ್ಕೆ 10 ದಿನದಲ್ಲಿ ಬರೋಬ್ಬರಿ 9 ಲಕ್ಷ ಜನ ಭೇಟಿ ನೀಡಿದ್ದರು.

First Published Aug 21, 2022, 8:38 AM IST | Last Updated Aug 21, 2022, 8:38 AM IST

ಈ ಬಾರಿಯ ಸ್ವಾತಂತ್ರ ದಿನಾಚರಣೆ ಸಲುವಾಗಿ ಆಯೋಜಿಸಿದ್ದ ಲಾಲ್‌ಭಾಗ್ ಫಲಪುಷ್ಪ ಪ್ರದರ್ಶನಕ್ಕೆ 10 ದಿನದಲ್ಲಿ ಬರೋಬ್ಬರಿ 9 ಲಕ್ಷ ಜನ ಭೇಟಿ ನೀಡಿದ್ದರು. ಫಲಪುಷ್ಪ ತುಂಬಾ ಪವರ್‌ಸ್ಟಾರ್ ರಾರಾಜಿಸುತ್ತಿದ್ದರು. ಹೂಗಳಲ್ಲಿ ಅರಳಿದ್ದ ಪವರ್‌ಸ್ಟಾರ್ ಅಪ್ಪುವನ್ನು ನೋಡಲು ಜನ ಮುಗಿಬಿದ್ದಿದ್ದು ಬರೀ ಟಿಕೆಟ್‌ನಿಂದಲೇ 3.5 ಕೋಟಿ ಗಳಿಕೆಯಾಗಿದೆ. ಈ ಮೂಲಕ ಅಪ್ಪು ಸದಾ ಕಾಲ ಅಜರಾಮರ ಎಂಬುದನ್ನು ಸಾಬೀತುಪಡಿಸಿದ್ದಾರೆ. ಕನ್ನಡದ ನಟ ಸಾರ್ವಭೌಮ ಪುನೀತ್ ರಾಜ್‌ಕುಮಾರ್ ಅವರೇ ಈ ಬಾರಿಯ ಫಲಪುಷ್ಪ ಪ್ರದರ್ಶನದ ಥೀಮ್ ಆಗಿದ್ದರು.