ಸ್ಯಾಂಡಲ್​ವುಡ್ 2024: ಗಳಿಸಿದ್ದೆಷ್ಟು? ಕಳೆದಿದ್ದೆಷ್ಟು? 226 ಸಿನಿಮಾಗಳು ರಿಲೀಸ್, ಲಾಭ ಕಂಡಿದ್ದು ಜಸ್ಟ್ 10!

2024ರಲ್ಲಿ ಕನ್ನಡ ಚಿತ್ರರಂಗವು 226 ಚಿತ್ರಗಳನ್ನು ಬಿಡುಗಡೆ ಮಾಡಿತು, ಆದರೆ ಕೇವಲ 10 ಚಿತ್ರಗಳು ಮಾತ್ರ ಲಾಭ ಗಳಿಸಿದವು. ಚಿತ್ರಮಂದಿರಗಳಿಗೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾದರೂ, ಭೀಮ ಸಿನಿಮಾ ಚಿತ್ರರಂಗಕ್ಕೆ ಗೆಲುವಿನ ಖುಷಿ ತಂದಿತು.

Share this Video
  • FB
  • Linkdin
  • Whatsapp

2024 ಅಂತ್ಯಗೊಂಡಿದೆ.. ವರ್ಷದ ಕೊನೆ ಚಿತ್ರವಾಗಿ ಬಂದ ಮ್ಯಾಕ್ಸ್ ಸಕ್ಸಸ್ ಕಂಡಿದ್ದು, ಚಿತ್ರರಂಗ ಗೆಲುವಿನ ಖುಷಿಯಲ್ಲಿದೆ. ಆದ್ರೆ ಇಡೀ ವರ್ಷದಲ್ಲಿ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಗೆಲುವು , ಸೋಲುಗಳೆಷ್ಟು. ಕನ್ನಡ ಚಿತ್ರೋದ್ಯಮ ಈ ವರ್ಷ ಎಷ್ಟು ಗಳಿಕೆ ಮಾಡ್ತು.. ಎಷ್ಟು ಕಳೆದುಕೊಂಡ್ತು. ಸ್ಯಾಂಡಲ್​ವುಡ್ ಪಾಲಿಗೆ 2024 ಎಷ್ಟು ಖುಷಿ ತಂತು..? ಎಷ್ಟು ನೋವು ತಂತು ಅನ್ನೋ ಫ್ಲ್ಯಾಶ್ ಬ್ಯಾಕ್ ಕಹಾನಿ ಇಲ್ಲಿದೆ ನೋಡಿ..ನ್ನಡ ಸಿನಿರಂಗದ 2024ರ ಫ್ಲ್ಯಾಶ್ ಬ್ಯಾಕ್ ನೋಡಹೋದ್ರೆ ಈ ವರ್ಷ ಉದ್ಯಮದ ಪಾಲಿಗೆ ಅಷ್ಟೇನೂ ಲಾಭದಾಯಕವಾಗಿ ಇರಲಿಲ್ಲ. ಹಾಗಂತ ತೆರೆಗೆ ಬಂದ ಸಿನಿಮಾಗಳ ಸಂಖ್ಯೆಯೇನೂ ಕಮ್ಮಿಯಿಲ್ಲ. ಬರೊಬ್ಬರಿ 226 ಸಿನಿಮಾಗಳು ಈ ವರ್ಷ ತೆರೆಗೆ ಬಂದಿವೆ. ಆದ್ರೆ ಇವುಗಳ ಪೈಕಿ ನಿರ್ಮಾಪಕರಿಗೆ ಲಾಭ ಅಂತ ಮಾಡಿಕೊಟ್ಟಿದ್ದು ಜಸ್ಟ್ 10 ಸಿನಿಮಾಗಳು ಮಾತ್ರ. ಜನ ಚಿತ್ರಮಂದಿರಕ್ಕೆ ಬರೋದು ಈ ವರ್ಷವೂ ಕಡಿಮೆ ಆಯ್ತು. ಹಲವು ಸಿಂಗಲ್ ಸ್ಕ್ರೀನ್ ಥಿಯೇಟರ್ಸ್​ ಬಾಗಿಲು ಹಾಕಿದ್ವು.ಹೀಗಾದ್ರೆ ನಮ್ಮ ಇಂಡಸ್ಟ್ರಿಯ ಬಿಜಿನೆಸ್ ಗತಿಯೇನು ಅಂತ ಚಿತ್ರಕರ್ಮಿಗಳು ಟೆನ್ಶನ್ ಆಗಿದ್ರು. ಹೀಗೆ ಟೆನ್ಶನ್​ನಲ್ಲಿದ್ದವರನ್ನ ಕೊಂಚ ರಿಲ್ಯಾಕ್ಸ್ ಮಾಡಿದ ಸಿನಿಮಾ ಅಂದ್ರೆ ದುನಿಯಾ ವಿಜಯ್ ನಟನೆ ನಿರ್ದೇಶನದ ಭೀಮ ಸಿನಿಮಾ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2024ರಲ್ಲಿ ಯಾರೂ ನೋಡಿರದ ಫೋಟೋಗಳನ್ನು ಹಂಚಿಕೊಂಡ ಮೇಘನಾ ರಾಜ್!

Related Video