ಗುಡ್‌ ಟಚ್‌, ಬ್ಯಾಡ್‌ ಟಚ್‌ ಬಗ್ಗೆ ಮಕ್ಕಳಿಗೆ ಹೇಳಿ ಕೊಡೋದು ಹೇಗೆ?

ಜಗತ್ತನ್ನೇ ಅರಿಯದ ಮುಗ್ಧ ಕಂದಮ್ಮಗಳು ಕಾಮುಕರ ಕೈಗೆ ಸಿಕ್ಕಿ ನಲುಗಿದ ಪ್ರಕರಣಗಳು ಕೂಡ ಆಗಾಗ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಹೀಗಿರುವಾಗ  ಬ್ಯಾಡ್ ಟಚ್‌ ಎಂದರೇನು, ಯಾರಾದರೂ ಕೆಟ್ಟದಾಗಿ ವರ್ತಿಸಿದರೆ ಏನು ಮಾಡಬೇಕು ಎಂದೆಲ್ಲಾ ಮಗುವಿಗೆ ತಿಳಿಸಿಕೊಡಬೇಕು. ಆ ಬಗ್ಗೆ ತಜ್ಞ ವೈದ್ಯರು ಮಾಹಿತಿ ನೀಡಿದ್ದಾರೆ.

First Published Jun 6, 2023, 3:06 PM IST | Last Updated Jun 6, 2023, 3:06 PM IST

ಹೆಣ್ಣಾಗಿ ಹುಟ್ಟುವುದೇ ತಪ್ಪೇ ಅನ್ನೋ ಪ್ರಶ್ನೆ ಮೂಡಿಸುವಂತಹಾ ಸಮಾಜದಲ್ಲಿ ನಾವಿದ್ದೇವೆ. ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿವೆ. ಮೂರು ವರ್ಷದ ಹೆಣ್ಣು ಮಗುವನ್ನು ಸ್ಕೂಲ್‍ಗೆ ಸೇರಿಸುವಾಗ ಅಲ್ಲಿನ ಪರಿಸರ, ಪುರುಷ ಸಿಬ್ಬಂದಿಯ ಬಗ್ಗೆ ಹೆತ್ತವರು ವಿಚಾರಿಸುವಂತಹ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಎಷ್ಟೋ ಬಾರಿ ಮನೆಗೆ ಬರುವ ಸ್ನೇಹಿತರು, ಸಂಬಂಧಿಕರನ್ನೇ ಅನುಮಾನದ ದೃಷ್ಟಿಯಿಂದ ನೋಡುವ ಅನಿವಾರ್ಯತೆ ತಾಯಿಗಿದೆ. ಮುಗ್ಧ ಕಂದಮ್ಮಗಳು ಕಾಮುಕರ ಕೈಗೆ ಸಿಕ್ಕಿ ನಲುಗಿದ ಪ್ರಕರಣಗಳು ಕೂಡ ಆಗಾಗ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಇದು ಸಹಜವಾಗಿಯೇ ಹೆಣ್ಣು ಹೆತ್ತವರಲ್ಲಿ ಆತಂಕ ಮೂಡಿಸುತ್ತಿವೆ. ಹೀಗಿರುವಾಗ ಮಗುವಿಗೆ ಬ್ಯಾಡ್ ಮತ್ತು ಗುಡ್ ಟಚ್ ಬಗ್ಗೆ ಪೋಷಕರು, ಅದರಲ್ಲೂ ತಾಯಿ ತಿಳಿ ಹೇಳುವುದು ಅತ್ಯಗತ್ಯ. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮಕ್ಕಳ ತಜ್ಞ ಡಾ.ಸಯ್ಯದ್ ಮುಜಾಹಿದ್ ಹುಸೇನ್ ನೀಡಿದ್ದಾರೆ.

Childrens Health: ಮಕ್ಕಳು ಹಾಸಿಗೆ ಒದ್ದೆ ಮಾಡೋ ಅಭ್ಯಾಸ ಬಿಡಿಸೋದು ಹೇಗೆ?