ಇಬ್ಬರ ಬಲಿ ಪಡೆದಿದ್ದ ಪುಂಡಾನೆಗಳು ಲಾಕ್.. ಕಾಡಾನೆ ನೋಡಿ ಜನ ಶಾಕ್..!

ರಾಮನಗರದಲ್ಲಿ ಮೂರು ದಿನಗಳ ಅರಣ್ಯ ಇಲಾಖೆಯ ಕಾರ್ಯಾಚರಣೆಯ ನಂತರ ಎರಡು ಜೀವಗಳನ್ನು ಬಲಿ ಪಡೆದಿದ್ದ ಒಂಟಿಸಲಗ ಕೊನೆಗೂ ಸೆರೆಯಾಗಿದೆ.

First Published Jun 9, 2023, 1:58 PM IST | Last Updated Jun 9, 2023, 1:58 PM IST

ರಾಮನಗರದಲ್ಲಿ ಮೂರು ದಿನಗಳ ಅರಣ್ಯ ಇಲಾಖೆಯ ಕಾರ್ಯಾಚರಣೆಯ ನಂತರ ಎರಡು ಜೀವಗಳನ್ನು ಬಲಿ ಪಡೆದಿದ್ದ ಒಂಟಿಸಲಗ ಕೊನೆಗೂ ಸೆರೆಯಾಗಿದೆ. ಜಿಲ್ಲೆಯಲ್ಲಿ ರೈತರು, ಗ್ರಾಮಸ್ಥರಿಗೆ ಪ್ರತಿನಿತ್ಯ ತೊಂದರೆ ನೀಡ್ತಿದ್ದ, ಕಾಡಿನಲ್ಲಿ ಅಡ್ಡಾದಿಡ್ಡಿ ಓಡಾಟ ನಡೆಸುತ್ತಿದ್ದ ಪುಂಡಾನೆಯನ್ನು ನಾಗರಹೊಳೆಯ ಅಭಿಮನ್ಯು ಆನೆಯ ತಂಡದ ಸಹಾಯದಿಂದ ಸೆರೆ ಹಿಡಿಯಲಾಗಿದೆ.ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ತೆಂಗಿನಕಲ್ಲು ಅರಣ್ಯ ಪ್ರದೇಶದ ಕಾಡನಕುಪ್ಪೆ- ಅರಳಾಳುಸಂದ್ರ ಗ್ರಾಮದಲ್ಲಿ. ಕಳೆದ ಹಲವು ತಿಂಗಳಿಂದ ಸಾಕಷ್ಟು ತೊಂದರೆ ನೀಡ್ತಿದ್ದ, ಪುಂಡಾನೆಯನ್ನು ಸೆರಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ನಾಗರಹೊಳೆ ವೈದ್ಯಾಧಿಕಾರಿಗಳ ತಂಡ ಯಶಸ್ವಿಯಾಗಿದೆ. 

Video Top Stories