ಕರಾವಳಿಯಲ್ಲಿ ಇಂದು ಯೋಗಿ ಮಿಂಚು: ಕಾರ್ಕಳದಲ್ಲಿ ಸುನೀಲ್‌ ಕುಮಾರ್‌ ಪರ ಮತಶಿಕಾರಿ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮೇ. 6ರಂದು ಕಾರ್ಕಳದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸುನೀಲ್‌ ಕುಮಾರ್‌ ಪರ ರೋಡ್‌ ಶೋ ನಡೆಸಲಿದ್ದಾರೆ.

Share this Video
  • FB
  • Linkdin
  • Whatsapp

ಉಡುಪಿ: ಇಂದು ಕರಾವಳಿ ಭಾಗದಲ್ಲಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ರೋಡ್ ಶೋ ನಡೆಸಲಿದ್ದಾರೆ. ಕಾರ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸುನೀಲ್‌ ಕುಮಾರ್‌ ಪರ ಯೋಗಿ ಪ್ರಚಾರ ಮಾಡಲಿದ್ದಾರೆ. ಮಧ್ಯಾಹ್ನ 1.15ಕ್ಕೆ ಯೋಗಿ ಕಾರ್ಕಳಕ್ಕೆ ಆಗಮಿಸಲಿದ್ದು, ರಸ್ತೆ ಮೂಲಕ ಪ್ರಚಾರ ವಾಹನದಲ್ಲಿ ಯೋಗಿ ಮತಬೇಟೆ ನಡೆಸಲಿದ್ದಾರೆ. ಬಳಿಕ ಗಾಂಧಿ ಮೈದಾನದಲ್ಲಿ ಪ್ರಚಾರ ವಾಹನದಲ್ಲಿ ಭಾಷಣ ಮಾಡಲಿದ್ದಾರೆ. ಇನ್ನೂ ಯೋಗಿ ಬೃಹತ್ ರೋಡ್ ಶೋ ಅನಂತಶಯನ ವೃತ್ತದಿಂದ ನಗರದ ಮುಖ್ಯರಸ್ತೆಯಲ್ಲಿ ಸಾಗಿ ಶ್ರೀ ವೆಂಕಟರಮಣ ದೇವಸ್ಥಾನದ ವರೆಗೆ ಬರಲಿದೆ. ಯೋಗಿ ಆದಿತ್ಯನಾಥ್‌ ಆಗಮನ ಹಿನ್ನೆಲೆ ನಗರದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ರೋಡ್‌ ಶೋ ವೇಳೆ ಭದ್ರತೆ ಹಿನ್ನೆಲೆಯಲ್ಲಿ ನಗರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಪೊಲೀಸರು ಈಗಾಗಲೇ ಸೂಚನೆ ನೀಡಿದ್ದಾರೆ.

ಇದನ್ನೂ ವೀಕ್ಷಿಸಿ: ಕುರುಕ್ಷೇತ್ರದ ಕೊನೇ ಕ್ಷಣದಲ್ಲಿ ಅಪ್ಪ-ಮಗನ ಆಟ, ಅಖಾಡಕ್ಕೆ ಬಿಎಸ್’ವೈ-ವಿಜಯೇಂದ್ರ..!

Related Video