ಕುರುಕ್ಷೇತ್ರದ ಕೊನೇ ಕ್ಷಣದಲ್ಲಿ ಅಪ್ಪ-ಮಗನ ಆಟ, ಅಖಾಡಕ್ಕೆ ಬಿಎಸ್’ವೈ-ವಿಜಯೇಂದ್ರ..!

ಕರ್ನಾಟಕ ಕುರುಕ್ಷೇತ್ರದಲ್ಲಿ ಅಪ್ಪ-ಮಗನ ಜೋಡಿ ಅಂತ ಯಾರಾದರು ಇದ್ದರೆ ಅದು ಶಿಕಾರಿವೀರ ಯಡಿಯೂರಪ್ಪ ಮತ್ತವರ ಮಗ ವಿಜಯೇಂದ್ರ.  ಗುಡುಗು-ಮಿಂಚಿನ ಜೋಡಿ ರಣಭೂಮಿಯ ರಣಯುದ್ಧದಲ್ಲಿ ಏಕಕಾಲದಲ್ಲಿ ಧೂಳೆಬ್ಬಿಸುತ್ತಾ ಇದೆ. ಚುನಾವಣೆಗೆ ಬೆರಳೆಣಿಕೆಯ ದಿನಗಳಷ್ಟೇ ಬಾಕಿ. ಹೀಗಾಗಿ ರಣಕಲಿಗಳು ಕೊನೇ ಕ್ಷಣದಲ್ಲಿ ರೋಚಕ ದಾಳಗಳನ್ನು ಉರುಳಿಸ್ತಾ ಇದ್ದಾರೆ.

First Published May 6, 2023, 10:33 AM IST | Last Updated May 6, 2023, 10:33 AM IST

ಪ್ರಧಾನಿ ಮೋದಿಯ ಬಹುಮತದ ಸರ್ಕಾರ ಕನಸನ್ನು ನನಸು ಮಾಡಲು ಅಪ್ಪ-ಮಗನನ್ನು ಕೇಸರಿ ಪಡೆ ನಿರ್ಣಾಯಕ ಯುದ್ಧಕ್ಕೆ ಇಳಿಸಿ ಬಿಟ್ಟಿದೆ. ಗುರುವಾರದಿಂದ ಯಡಿಯೂರಪ್ಪ ಮತ್ತು ವಿಜಯೇಂದ್ರ ಪ್ರತ್ಯೇಕ ದಂಡಯಾತ್ರೆ ಶುರು ಮಾಡಿದ್ದಾರೆ. ಅಪ್ಪ-ಮಗನ ಟಾರ್ಗೆಟ್  30 ಕ್ಷೇತ್ರಗಳು. ಅದರಲ್ಲು ರಾಜಾಹುಲಿ ಬಿಎಸ್‌ವೈ ಕಮಲ ಪತಾಕೆ ಹಾರಿಸಲು ನೇರವಾಗಿ ನುಗ್ಗಿರುವುದು ಜೆಡಿಎಸ್ ಭದ್ರಕೋಟೆಗೆ.  ಈ ಬಾರಿ ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡಿ ಹೊಸ ಚರಿತ್ರೆ ನಿರ್ಮಿಸಲು ಬಿಜೆಪಿ ಮುಂದಾಗಿದೆ. ಅದಕ್ಕಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಮುಂಚೂಣಿಗೆ ಬಿಟ್ಟು, ಕೊನೇ ಕ್ಷಣದ ಆಟ ಶುರು ಮಾಡಿದೆ. ದಳಪತಿಗಳ ಕೋಟೆಗೆ ನುಗ್ಗಿರುವ ಬಿಎಸ್‌ವೈ, ಭರ್ಜರಿ ಪ್ರಚಾರ ನಡೆಸಿದ್ದಾರೆ.ಅಷ್ಟಕ್ಕೂ ಅಪ್ಪ-ಮಗನ ಶಿಕಾರಿವ್ಯೂಹದೊಳಗೆ ಅಡಗಿರೋದು ಅದೆಂಥಾ ರಹಸ್ಯ..? ಇಲ್ಲಿದೆ ನೋಡಿ 
 

Video Top Stories