Loksabha Eection 2024: ದಾವಣಗೆರೆಗೆ ಯಡಿಯೂರಪ್ಪ ನೇತೃತ್ವದ ಟೀಂ: ರೆಬೆಲ್ಸ್ ಬಳಿಗೆ ತೆರಳುತ್ತಿರುವ ಯಡಿಯೂರಪ್ಪ ನಿಯೋಗ !

ರೆಬಲ್ ನಾಯಕರಿಗೆ ಬೆಂಗಳೂರಿಗೆ ಬರುವಂತೆ ನೀಡಲಾಗಿದ್ದ ಆಹ್ವಾನ
ಆಹ್ವಾನ‌ ತಿರಸ್ಕರಿಸಿ ದಾವಣಗೆರೆಯಲ್ಲೇ ಉಳಿದ ರೆಬಲ್ ನಾಯಕರು
ಇದೀಗ ರೆಬೆಲ್ಸ್ ಬಳಿಗೆ ತೆರಳುತ್ತಿರುವ ಯಡಿಯೂರಪ್ಪ ನಿಯೋಗ
 

Share this Video
  • FB
  • Linkdin
  • Whatsapp

ಬಿಜೆಪಿಯಲ್ಲಿ ದಾವಣಗೆರೆ ಟಿಕೆಟ್ ಅಸಮಾಧಾನ ಬಗೆಹರಿದಿಲ್ಲ. ಗಾಯತ್ರಿ ಸಿದ್ದೇಶ್ವರ್(Gayatri Siddeshwar) ಬಗ್ಗೆ ಅಸಮಾಧಾನ ತೀವ್ರಗೊಂಡಿದೆ. ರೆಬಲ್ ಟೀಂ ಸಮಾಧಾನಗೊಳಿಸಲು ಯಡಿಯೂರಪ್ಪ(Yediyurappa) ಎಂಟ್ರಿಕೊಟ್ಟಿದ್ದಾರೆ. ಇಂದು ದಾವಣಗೆರೆಗೆ(Davanagere) ಯಡಿಯೂರಪ್ಪ ನೇತೃತ್ವದ ಟೀಂ ಬರಲಿದೆ. ಬಿಜೆಪಿ(BJP) ಮುಖಂಡರ ನಿಯೋಗದಿಂದ ಮಹತ್ವದ ಸಭೆ ನಡೆಯಲಿದೆ. ರಾಜ್ಯ ‌ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರವಾಲ್ ಸಾಥ್ ನೀಡಲಿದ್ದು, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ, ಎಂ ಎಲ್ ಸಿ ರವಿಕುಮಾರ್, ಬೈರತಿ ಬಸವರಾಜ್ ಭೇಟಿ ನೀಡಿ, ಎಸ್ ಎ ರವೀಂದ್ರನಾಥ , ಎಂ ಪಿ ರೇಣುಕಾಚಾರ್ಯ ಜೊತೆ ಚರ್ಚೆ ನಡೆಸಲಿದ್ದಾರೆ. ಗಾಯತ್ರಿ ಸಿದ್ದೇಶ್ವರ್‌ಗೆ ಪ್ರತಿಯಾಗಿ ರೆಬಲ್ ಅಭ್ಯರ್ಥಿ ಹಾಕಲು ತಯಾರಿ ನಡೆಸಲಾಗುತ್ತಿದೆ. ಕಾರ್ಯಕರ್ತರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿರುವ ರೆಬಲ್ ನಾಯಕರು. 

ಇದನ್ನೂ ವೀಕ್ಷಿಸಿ: Watch Video: ಶಾಸಕನಾಗುವ ಮೊದಲೇ ಮೋದಿ ಸಿಎಂ ಆಗಿದ್ದು ಹೇಗೆ? ಗೋದ್ರಾ ಹತ್ಯಾಕಾಂಡ ಮೋದಿ ಮೇಲೆ ಬೀರಿದ ಪರಿಣಾಮವೇನು?

Related Video