ಬಿಎಸ್‌ವೈ ಪ್ರತಿಭಟನೆ ಮಾಡಿದ್ರೆ ಒಳ್ಳೆಯದೇ, ಅವರು ನಮ್ಮ ಯೋಜನೆಗಳ ಪ್ರಚಾರ ಮಾಡುತ್ತಿದ್ದಾರೆ: ಡಿಕೆಶಿ

ನಾವು ಏನಾದರೂ ತಪ್ಪು ಮಾಡಿದ್ರೆ, ನಮ್ಮನ್ನು ತಿದ್ದಲಿ. ತಿದ್ದಿ ಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು: ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಪ್ರತಿಭಟನೆ ಮಾಡಿದ್ರೆ ಒಳ್ಳೆಯದೇ. ಅವರು ನಮ್ಮ ಎಲ್ಲಾ ಯೋಜನೆಗಳ ಪ್ರಚಾರ ಮಾಡುತ್ತಿದ್ದಾರೆ. ನಮ್ಮ ಯೋಜನೆಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಲೇವಡಿ ಮಾಡಿದ್ದಾರೆ. ನಾವು ಏನಾದರೂ ತಪ್ಪು ಮಾಡಿದ್ರೆ, ನಮ್ಮನ್ನು ತಿದ್ದಲಿ. ತಿದ್ದಿ ಕೊಳ್ಳಲು ನಾವು ಸಿದ್ಧರಿದ್ದೇವೆ. ನಾವು ಅವರ ಸಲಹೆಗಳನ್ನು ತೆಗೆದುಕೊಂಡಿದ್ದೇವೆ ಎಂದು ಡಿಕೆಶಿ ಹೇಳಿದ್ದಾರೆ.

ನಾವು ಐದು ಗ್ಯಾರಂಟಿಗಳನ್ನು ಜಾರಿಗೊಳಿಸುತ್ತೇವೆ. ಈಗಾಗಲೇ ಒಂದನ್ನು ಅನುಷ್ಠಾನ ಮಾಡಲಾಗಿದ್ದು, ಜನ ಅದರ ಫಲ ಪಡೆಯುತ್ತಿದ್ದಾರೆ. ಬಿಜೆಪಿಯವರು ಜನರ ಪ್ರತಿಕ್ರಿಯೆ ನೋಡಿ ಗಾಬರಿಯಾಗಿದ್ದಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: ಮೋದಿ ಪರ ನಿಂತವರೆಷ್ಟು..? ಕಾಂಗ್ರೆಸ್ ಕೈಹಿಡಿದವರೆಷ್ಟು..?: ಸಂಖ್ಯೆಗಳು ಹೇಳುತ್ತಿವೆಯಾ ವಿಚಿತ್ರ ಫಲಿತಾಂಶ!

Related Video