Political Express: ಸೀರೆ ಹಂಚುತ್ತಿದ್ದ ಬಿಜೆಪಿ ಶಾಸಕ ಬೆಂಬಲಿಗರಿಗೆ ಹಿಗ್ಗಾಮುಗ್ಗಾ ಬೈದ ಮಹಿಳೆ!

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಮೈಬೂಬ್ ನಗರದಲ್ಲಿ ಸೀರೆ ಹಂಚಲು ಬಂದಿದ್ದ ಬಿಜೆಪಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ  ಬೆಂಬಲಿಗರಿಗೆ ಮಹಿಳೆ ಹಾಗೂ ಸ್ಥಳಿಯರು ತರಾಟೆ ತೆಗೆದುಕೊಂಡಿರುವ ಘಟನೆ ನಡೆದಿದೆ.

Share this Video
  • FB
  • Linkdin
  • Whatsapp

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಮೈಬೂಬ್ ನಗರದಲ್ಲಿ ಸೀರೆ ಹಂಚಲು ಬಂದಿದ್ದ ಬಿಜೆಪಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಬೆಂಬಲಿಗರಿಗೆ ಮಹಿಳೆ ಹಾಗೂ ಸ್ಥಳಿಯರು ತರಾಟೆ ತೆಗೆದುಕೊಂಡಿರುವ ಘಟನೆ ನಡೆದಿದೆ. ಕಳೆದ 5 ವರ್ಷಗಳಲ್ಲಿ ಒಂದು ಆಶ್ರಯ ಮನೆ ಸಹ ಕಟ್ಟಿಸಲಿಲ್ಲ. ನಿಮ್ಮ ಸೀರೆ ಬೇಡ ಎಂದು ಅಲ್ಪಸಂಖ್ಯಾತ ಸಮುದಾಯದ ಮಹಿಳೆ ಗರಂ ಆದರು. ಸೀರೆ ಹಂಚಲು ಬಂದಿದ್ದ ವ್ಯಕ್ತಿ ಮಹಿಳೆಗೆ ಸಮಜಾಯಿಸಿ ನೀಡಲು ಮುಂದಾದರೂ ಯಾವುದಕ್ಕೂ ಕ್ಯಾರೇ ಎನ್ನದ ಮಹಿಳೆ ನಿಮ್ಮ ಸೀರೆ ಬೇಡ ಎಂದಿದ್ದಾರೆ. ಪಟ್ಟಣ ಪಂಚಾಯತಿಯವರೂ ಅವರೇ ಶಾಸಕರೂ ಅವರೇ ಎಂದು ಮಹಿಳೆ ಹರಿಹಾಯ್ದಿದ್ದಾರೆ. ಮಹಿಳೆ ಜೊತೆಗೆ ಅವರ ಪುತ್ರ ಹಾಗೂ ಸ್ಥಳಿಯ ನಿವಾಸಿಗಳು ಕೂಡ ಆಕ್ರೋಶ ಹೊರಹಾಕಿದ್ದಾರೆ. ಜೋರು ಮಾಡಿದವರ ಕೆಲಸ ಮಾತ್ರ ಮಾಡುತ್ತೀರಿ ನಮ್ಮಂಥವರ ಕೆಲಸ ಮಾಡಲ್ಲಾ ಎಂದು ಜನ ಕೆಂಡ ಕಾರಿದ್ದಾರೆ.

Related Video