Asianet Suvarna News Asianet Suvarna News

ಸಿದ್ದರಾಮಯ್ಯ ಕ್ಷೇತ್ರ ಯಾವುದು?: ಲಿಸ್ಟ್‌ಗೆ ಹೊಸ ಕ್ಷೇತ್ರ ಸೇರ್ಪಡೆ!

ಸಿದ್ದರಾಮಯ್ಯ ಕ್ಷೇತ್ರ ಯಾವುದು? ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಇದರ ನಡುವೆ ಸಿದ್ದರಾಮಯ್ಯ ಆಯ್ಕೆ ಕ್ಷೇತ್ರಗಳ ಪೈಕಿ ಕೊಪ್ಪಳ ಹಾಗೂ ಕುಷ್ಠಗಿ ಕ್ಷೇತ್ರದಿಂದ ಆಹ್ವಾನ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಕುರುಬ, ಮುಸ್ಲಿಮ್ ಹಾಗೂ ಎಸ್‌ಸಿ ಎಸ್‌ಟಿ ಮತಗಳು ಹೆಚ್ಚಿವೆ. ಹೀಗಾಗಿ ಇಲ್ಲಿ ಸುಲಭ ಗೆಲುವು ಎಂದು ಅಂದಾಜಿಸಲಾಗಿದೆ.

ಬೆಂಗಳೂರು (ಮಾ.23): ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕ್ಷೇತ್ರ ಆಯ್ಕೆ ಗೊಂದಲ ಮುಂದುವರಿದಿದೆ. ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿಯಲ್ಲಿ ಸ್ಪರ್ಧಿಸಿ ಗೆದ್ದು, ಈ ಬಾರಿ ಅಲ್ಲಿ ಸ್ಪರ್ಧಿಸುವುದಿಲ್ಲ ಎಂದು ಆರಂಭದಲ್ಲಿಯೇ ಹೇಳಿದ್ದರು. ಅಲ್ಲದೇ ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಹೋಗಿ ಅಲ್ಲಿ ಘೋಷಣೆ ಮಾಡಿ ಸರ್ವೆ ಮಾಡಿಸಿ ಅಲ್ಲಿನ ಚುನಾವಣಾ ವಾತಾವರಣ ತಮಗೆ ಅನುಕೂಲವಾಗಿಲ್ಲ ಎಂದು ಹಿಂದೆ ಸರಿದಿದ್ದು, ಇದೀಗ ಅವರ ಕ್ಷೇತ್ರ ಯಾವುದು? ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಇದರ ನಡುವೆ ಸಿದ್ದರಾಮಯ್ಯ ಆಯ್ಕೆ ಕ್ಷೇತ್ರಗಳ ಪೈಕಿ ಕೊಪ್ಪಳ ಹಾಗೂ ಕುಷ್ಠಗಿ ಕ್ಷೇತ್ರದಿಂದ ಆಹ್ವಾನ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಕುರುಬ, ಮುಸ್ಲಿಂ ಹಾಗೂ ಎಸ್‌ಸಿ ಎಸ್‌ಟಿ ಮತಗಳು ಹೆಚ್ಚಿವೆ. ಹೀಗಾಗಿ ಇಲ್ಲಿ ಸುಲಭ ಗೆಲುವು ಎಂದು ಅಂದಾಜಿಸಲಾಗಿದೆ.