Asianet Suvarna News Asianet Suvarna News

ಚರ್ಚೆಗೆ ಸಿದ್ಧ..ವಿಪಕ್ಷಗಳಿಗೆ ನೈತಿಕತೆ ಇದ್ಯಾ ಎಂದ ಸಿಎಂ: ವಾಲ್ಮೀಕಿ ಹಗರಣದ ಚರ್ಚೆಗೆ ಪಟ್ಟು ಹಿಡಿದ ಬಿಜೆಪಿ ನಾಯಕರು !

ವಿಧಾನಸಭೆ ಕಲಾಪದಲ್ಲಿ ವಾಲ್ಮೀಕಿ ಹಗರಣ ಕೋಲಾಹಲ ಸೃಷ್ಟಿಸಿದೆ. ವಿಪಕ್ಷಗಳಿಗೆ ನೈತಿಕತೆ ಇದ್ಯಾ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 

First Published Jul 16, 2024, 10:50 AM IST | Last Updated Jul 16, 2024, 10:50 AM IST

ಕಾಂಗ್ರೆಸ್ ಸರ್ಕಾರದ (Congress government) ವಿರುದ್ಧ ಮೈತ್ರಿಪಡೆಗೆ ಹಗರಣಗಳ ಅಸ್ತ್ರ ಸಿಕ್ಕಿದ್ದು, ವಿಧಾನಸಭೆ ಕಲಾಪದಲ್ಲಿ(Assembly session) ವಾಲ್ಮೀಕಿ ಹಗರಣ ಕೋಲಾಹಲ ಸೃಷ್ಟಿಸಿದೆ. ಇದೀಗ ವಾಲ್ಮೀಕಿ ಹಗರಣದ ಚರ್ಚೆಗೆ ಬಿಜೆಪಿ (BJP) ನಾಯಕರು ಪಟ್ಟು ಹಿಡಿದಿದ್ದಾರೆ. ಚರ್ಚೆಗೆ ಸಿದ್ಧ.. ವಿಪಕ್ಷಗಳಿಗೆ ನೈತಿಕತೆ ಇದ್ಯಾ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ(Siddaramaiah) ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಯತ್ನಾಳ್, ಮೇಜು ಕುಟ್ಟಿ ಗುಡುಗಿದ್ದಾರೆ. ಇತಿಹಾಸದ ಪುಟದಲ್ಲಿ ದಲಿತರ ಹಣ ಹೊಡೆದ ಪ್ರಕರಣ ಇಲ್ಲ. ಇಲ್ಲಿ ಸತ್ತಿರುವವನು ದಲಿತ. ಲೂಟಿ ಹೊಡೆದವನು ದಲಿತ. ಕಟಾಕಟ್ ಅಂತ ಶೇ.100 ಹಣ ಹೊಡೆದ ಪ್ರಕರಣ ಇದು ಎಂದು ಆರ್‌.ಅಶೋಕ್ ಹೇಳಿದ್ದಾರೆ. ಹಣಕಾಸು ಇಲಾಖೆ ಗಮನಕ್ಕೆ ತಂದರೂ ಕ್ರಮವಾಗಿಲ್ಲ. ಬಿಜೆಪಿ ಬಿಟ್ಟರೂ ಹರಿಪ್ರಸಾದ್ ಬಿಡಲ್ಲ ಅಂದಿದ್ದಾರೆ ಎಂದು ಹರಿಪ್ರಸಾದ್ ಹೇಳಿಕೆ ಉಲ್ಲೇಖಿಸಿ ಆರ್‌. ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ವೀಕ್ಷಿಸಿ:  ಆ.1 ರಿಂದ 7ನೇ ವೇತನ ಆಯೋಗದ ಶಿಫಾರಸು ಜಾರಿ, ಸರ್ಕಾರಕ್ಕೆ ಧನ್ಯವಾದ: ಸಿ.ಎಸ್.ಷಡಾಕ್ಷರಿ

Video Top Stories