
ಆ.1 ರಿಂದ 7ನೇ ವೇತನ ಆಯೋಗದ ಶಿಫಾರಸು ಜಾರಿ, ಸರ್ಕಾರಕ್ಕೆ ಧನ್ಯವಾದ: ಸಿ.ಎಸ್.ಷಡಾಕ್ಷರಿ
12 ಲಕ್ಷ ನೌಕರರು, ನಿವೃತ್ತ ನೌಕರರಿಗೆ ಬಂಪರ್ ಗಿಫ್ಟ್
7ನೇ ವೇತನ ಆಯೋಗ ಶಿಫಾರಸು ಜಾರಿಗೆ ತೀರ್ಮಾನ
ಆ.1ರಿಂದ 7ನೇ ವೇತನ ಆಯೋಗದ ಶಿಫಾರಸು ಜಾರಿ
ರಾಜ್ಯ ಸರ್ಕಾರಿ(state government) ನೌಕರರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಆ.1 ರಿಂದ 7ನೇ ವೇತನ ಆಯೋಗದ ಶಿಫಾರಸು (7th Pay Commission) ಜಾರಿ ಮಾಡಲಾಗುವುದು. ಸರ್ಕಾರದ ನಿರ್ಧಾರಕ್ಕೆ ಸಿ.ಎಸ್.ಷಡಾಕ್ಷರಿ (Shadakshari C S) ಖುಷ್ ಆಗಿದ್ದಾರೆ. 27.50% ವೇತನ ನಿಗದಿಗೆ ಅನುಮೋದನೆ ಸಿಕ್ಕಿದೆ. ನೌಕರರ ಸಂಘದ ಅಧ್ಯಕ್ಷನಾಗಿ ಅಭಿನಂದನೆ ಸಲ್ಲಿಸುತ್ತೇನೆ . ಸಂಪುಟ ಸಭೆಯಲ್ಲಿ ಆದ ತೀರ್ಮಾನ ಸಂತೋಷ ತಂದಿದೆ. ವೇತನ ಆಯೋಗದ ಶಿಫಾರಸು ಜಾರಿಗೆ ಪ್ರತಿಭಟನೆ ಮಾಡಿದ್ವಿ. ಸಚಿವರಿಗೆ, ಉನ್ನತ ಮಟ್ಟದ ಅಧಿಕಾರಿಗಳಿಗೆ ಅಭಿನಂದನೆ ಎಂದು ನೌಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಕೆ.ಸುಧಾಕರ್ ರಾವ್ ನೇತೃತ್ವದ ವರದಿಯನ್ನು ಸಿಎಂ ಸಿದ್ದರಾಮಯ್ಯ ಸ್ವೀಕರಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: ಹೇಗಿದ್ದಾರೆ ನೋಡಿ ಪ್ರಕಾಶ್ ರಾಜ್ ಧರ್ಮ ಪತ್ನಿ! ಅಭಿನಯದಲ್ಲಿ ಅಪ್ಪನ್ನೇ ಮೀರಿಸುತ್ತಾನೆ ವೇದಾಂತ್!