Asianet Suvarna News Asianet Suvarna News

ಲೋಕಸಭಾ ರಿಸಲ್ಟ್ ಬೆನ್ನಲ್ಲೇ ಬಿಜೆಪಿಯಲ್ಲಿ ಶೀತಲ ಸಮರ ? ಲಿಂಗಾಯತ ಲೀಡರ್‌ಶಿಪ್‌ಗೆ ನಡೆಯುತ್ತಿದ್ಯಾ ಪೈಪೋಟಿ ?

ಯಡಿಯೂರಪ್ಪ ಬಳಿಕ ಲಿಂಗಾಯತ ನಾಯಕ ಯಾರೆಂಬ ಚರ್ಚೆ
ಬಿಜೆಪಿಯಲ್ಲಿ ಚರ್ಚೆಗೆ ಕಾರಣವಾಗಿದೆ ಸೋಮಣ್ಣ ಆಡಿದ ಮಾತು 
ಬಿಎಸ್‌ವೈ, ವಿಜಯೇಂದ್ರ ವಿರುದ್ಧ ಸೋಮಣ್ಣ ಅಸಮಾಧಾನ

ಲೋಕಸಭಾ ಚುನಾವಣೆ ಫಲಿತಾಂಶ ಬೆನ್ನಲ್ಲೇ ಬಿಜೆಪಿಯಲ್ಲಿ(BJP) ಶೀತಲ ಸಮರ ಶುರುವಾದಂತೆ ಕಾಣುತ್ತಿದೆ. ಕೇಂದ್ರ ಸಚಿವ  ವಿ.ಸೋಮಣ್ಣ(V Somanna) ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಹೈದರಾಬಾದ್ ಕರ್ನಾಟಕ ಭಾಗದ ಸೋಲಿನ ಬಗ್ಗೆ ಪ್ರಸ್ತಾಪ ಮಾಡಿದ್ದು, ಮಧ್ಯ ಕರ್ನಾಟಕದ ಸೋಲಿನ ಬಗ್ಗೆ ಸೋಮಣ್ಣ ಅಸಮಾಧಾನ ಹೊರಹಾಕಿದ್ದಾರೆ. ಪ್ರಮುಖ ಐದು ಕ್ಷೇತ್ರ ಸೋತಿದ್ದಕ್ಕೆ ಬಿಜೆಪಿಯಲ್ಲಿ ಟಾಕ್‌ವಾರ್‌ ಶುರುವಾಗಿದೆ. ಅರಮನೆ ಮೈದಾನದಲ್ಲಿ ನಡೆದ ಅಭಿನಂದನೆ ಕಾರ್ಯಕ್ರಮದಲ್ಲಿ ಯಾರೋ ಮಾಡಿದ ಪಾಪ, ಇನ್ಯಾರನ್ನೋ ಗುರಿ ಮಾಡಬೇಡಿ ಎಂದು ಹೇಳುವ ಮೂಲಕ ವಿಜಯೇಂದ್ರ(Vijayendra) ನಾಯಕತ್ವವನ್ನೇ ಪ್ರಶ್ನೆ ಮಾಡಿದ್ರಾ ಸೋಮಣ್ಣ? ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ. ರಾಜ್ಯದಲ್ಲಿ ಇನ್ನೂ ಎರಡು ಮೂರು ಕ್ಷೇತ್ರ ಗೆಲ್ಲಬಹುದಿತ್ತು. ಟಿಕೆಟ್ ಹಂಚಿಕೆಯಲ್ಲಿ ವ್ಯತ್ಯಾಸ ಆಯ್ತು ಎಂದ ಯಡಿಯೂರಪ್ಪ(Yediyurappa). ಸೋಮಣ್ಣ ಮಾತಿಗೆ ವೇದಿಕೆಯಲ್ಲೇ ಬಿಎಸ್‌ವೈ ಉತ್ತರ ನೀಡಿದ್ದಾರೆ.

ಇದನ್ನೂ ವೀಕ್ಷಿಸಿ:  ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ಉಪ್ಪಿಟ್ಟು ತಿಂತೀರಾ ? ಅಂಗನವಾಡಿಗಳಿಗೆ ಪೂರೈಕೆ ಆಗ್ತಿದೆ ಹುಳು ಹತ್ತಿರೋ ಗೋಧಿ ರವೆ !

Video Top Stories