ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ಉಪ್ಪಿಟ್ಟು ತಿಂತೀರಾ ? ಅಂಗನವಾಡಿಗಳಿಗೆ ಪೂರೈಕೆ ಆಗ್ತಿದೆ ಹುಳು ಹತ್ತಿರೋ ಗೋಧಿ ರವೆ !

ಹಾವೇರಿ ಜಿಲ್ಲೆಯ ಬಹುತೇಕ ಅಂಗನವಾಡಿಗಳಿಗೆ ಕಳಪೆ ರವೆ ಪೂರೈಕೆ ಆಗುತ್ತಿದ್ದು,ಅಂಗನವಾಡಿಗಳಿಗೆ ಹುಳು ಹತ್ತಿರೋ ಗೋಧಿ ರವೆ ಪೂರೈಕೆ ಆಗ್ತಿದೆ. 
 

First Published Jun 25, 2024, 10:59 AM IST | Last Updated Jun 25, 2024, 10:59 AM IST

ಹಾವೇರಿ: ಈ ಅಂಗನವಾಡಿ ಮಕ್ಕಳು ದಿನಾ ತಿನ್ನುವ ಫುಡ್‌ನನ್ನು ದನಗಳೂ ತಿನ್ನಲ್ಲ. ಪ್ರತಿ ದಿನ ಉಪ್ಪಿಟ್ಟು ತಿಂದು ಅಂಗನವಾಡಿ ಮಕ್ಕಳು ಬೇಸತ್ತಿದ್ದಾರೆ. ಅಲ್ಲದೇ ಅಂಗನವಾಡಿಗಳಿಗೆ (Anganwadis) ಹುಳು ಹತ್ತಿರೋ ಗೋಧಿ ರವೆ (Wheat Rave) ಪೂರೈಕೆ ಆಗ್ತಿದೆ.  ಉಪ್ಪಿಟ್ಟು ರವೆಯಲ್ಲಿ ಅರ್ಧ ಹೊಟ್ಟು,ಕಸ ಕಡ್ಡಿ ಇದ್ದು, ಹಾವೇರಿ (Haveri) ಜಿಲ್ಲೆಯ ಬಹುತೇಕ ಅಂಗನವಾಡಿಗಳಿಗೆ ಕಳಪೆ ರವೆ ಪೂರೈಕೆ ಆಗುತ್ತಿದೆ. ಅಂಗನವಾಡಿ ಮಕ್ಕಳ ಗೋಳನ್ನು ಇಲ್ಲಿ ಕೇಳೋರಿಲ್ಲ. ಅಂಗನವಾಡಿ ಕಂದಮ್ಮಗಳಿಗೆ ಮೊದಲೆಲ್ಲಾ ಪೌಷ್ಟಿಕ ಆಹಾರ ಸಿಗ್ತಿತ್ತು. ಈಗ ಪ್ರತಿ ದಿನ ಸಪ್ಪೆ ಉಪ್ಪಿಟ್ಟು ತಿಂದು ಮಕ್ಕಳು ಹೈರಾಣಾಗಿದ್ದಾರೆ. ಮೊದಲು ಪ್ರತಿ ದಿನ ಮಕ್ಕಳಿಗೆ ಹಾಲು,  ಶೇಂಗಾ ಬೆಲ್ಲ, ಮಧ್ಯಾಹ್ನ ಅನ್ನ ಸಾಂಬಾರ್, ಮೊಳಕೆ ಕಟ್ಟಿದ ಹೆಸರು ಕಾಳು‌, ಸಿಹಿ ರವೆ ಪಾಯಸ, ರವೆ ಕಿಚಡಿ, ಮೊಟ್ಟೆ ನೀಡಲಾಗುತ್ತಿತ್ತು. ಆದರೆ ಕೆಲ ತಿಂಗಳ ಹಿಂದೆ ಹೊಸ ಮೆನು ಜಾರಿ ಮಾಡಿದ್ದ ಸರ್ಕಾರ, ಈಗ ಕಿಚಡಿ ಬದಲು ಪ್ರತಿ ದಿನ ಉಪ್ಪಿಟ್ಟು ನೀಡಲಾಗ್ತಿದೆ. ಗರ್ಭಿಣಿ ಬಾಣಂತಿಯರಿಗೆ ಪ್ರತಿ ದಿನ ಮೊಟ್ಟೆ , ಹಾಲು, ನಾಲ್ಕು ದಿನ ಅನ್ನ ಸಾಂಬಾರ್, ಎರಡು ದಿನ ಉಪ್ಪಿಟ್ಟು  ನೀಡಲಾಗ್ತಿದೆ. ಗರ್ಭಿಣಿ, ಬಾಣಂತಿಯರಿಗೂ ಸತ್ವ ರಹಿತ ಅನ್ನ ಸಾಂಬಾರ್ ನೀಡಲಾಗ್ತಿದೆ.

ಇದನ್ನೂ ವೀಕ್ಷಿಸಿ:  ಇಂದ್ರಜಿತ್ ಲಂಕೇಶ್ ಪುತ್ರನ ಹಾಡು ಟ್ರೆಂಡಿಂಗ್! ದಕ್ಷಿಣದ ಸಿನಿಮಾಗಳ ಮುಂದೆ ಧೂಳೆಬ್ಬಿಸಿದ ‘ಗೌರಿ’ ಸಾಂಗ್ !

Video Top Stories