Asianet Suvarna News Asianet Suvarna News

ಒಂದು ದೇಶ, ಒಂದೇ ಕಾನೂನು ಬೇಕಾ ಬೇಡ್ವಾ ?: ಮೋದಿ ಮಾತಿಗೆ ಮುಗಿವಿದ್ದ ವಿಪಕ್ಷಗಳು

ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಇದರ ನಡುವೆ ಪರ-ವಿರೋಧದ ಚರ್ಚೆ ಆಗುತ್ತಿದೆ. 
 

ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ ದೇಶಾದ್ಯಂತ ಪರ-ವಿರೋಧ ಚರ್ಚೆ ಆರಂಭವಾಗಿದೆ. 2024ರ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಉಳಿದಿರುವ ಹೊತ್ತಲ್ಲಿ ಬಿಜೆಪಿ ಸಮಾನ ನಾಗರಿಕ ಸಂಹಿತೆಯ ಅಸ್ತ್ರವನ್ನು ಪ್ರಯೋಗ ಮಾಡಿದೆ. ಇದನ್ನು ಜಾರಿ ಮಾಡುವ ಬಗ್ಗೆ ಪ್ರಧಾನಿ ಮೋದಿ ಈಗಾಗಲೇ ಸೂಚನೆ ನೀಡಿದ್ದಾರೆ. ಇದರ ಬೆನ್ನಲೇ ವಿರೋಧ ಪಕ್ಷಗಳು ಇದನ್ನು ವಿರೋಧಿಸುತ್ತಿವೆ. ದೇಶದ ಎಲ್ಲ ಪ್ರಜೆಗಳಿಗೂ ಒಂದೇ ಕಾನೂನು ಇರಬೇಕು ಅನ್ನೋದು ಬಿಜೆಪಿ ನಿಲುವಾಗಿದೆ. ಆಮ್ ಆದ್ಮಿ ಪಕ್ಷ ಇದಕ್ಕೆ ಬೆಂಬಲವನ್ನು ನೀಡಿದೆ. ಆದ್ರೆ ಹಲವು ಮುಸ್ಲಿಂ ಸಂಘಟನೆಗಳು ಇದಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತಿವೆ. 

ಇದನ್ನೂ ವೀಕ್ಷಿಸಿ: ಬಸ್‌ ನಿಲ್ದಾಣ ಕಟ್ಟಡದಲ್ಲಿ ಬಾರ್‌ ಅಂಡ್‌ ರೆಸ್ಟೋರೆಂಟ್‌: ನಿಯಮಗಳನ್ನು ಗಾಳಿಗೆ ತೂರಿದ್ರಾ ಅಧಿಕಾರಿಗಳು ?

Video Top Stories