ಬಸ್ ನಿಲ್ದಾಣ ಕಟ್ಟಡದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್: ನಿಯಮಗಳನ್ನು ಗಾಳಿಗೆ ತೂರಿದ್ರಾ ಅಧಿಕಾರಿಗಳು ?
ಬಿಟಿಎಂ ಲೇಔಟ್‌ನ ಕುವೆಂಪುನಗರದ ಬಸ್ ನಿಲ್ದಾಣದ ನಾಲ್ಕನೇ ಮಹಡಿಯಲ್ಲಿ ಬಾರ್ & ರೆಸ್ಟೋರೆಂಟ್ ತೆರೆಯಲು ಬಿಎಂಟಿಸಿ ಅಧಿಕಾರಿಗಳು ಅವಕಾಶ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬಿಎಂಟಿಸಿ ಬಸ್ ನಿಲ್ದಾಣ ಕಟ್ಟಡದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಅವಕಾಶ ನೀಡಲಾಗಿದೆ. ಅದು ಕೂಡ ಸಾರಿಗೆ ಸಚಿವರ ಕ್ಷೇತ್ರದ ಬಸ್ ನಿಲ್ದಾಣದಲ್ಲೇ ಬಾರ್ ತಲೆ ಎತ್ತಿದೆ. ಬಿಟಿಎಂ ಲೇಔಟ್‌ನ ಕುವೆಂಪುನಗರದ ಬಸ್ ನಿಲ್ದಾಣದಲ್ಲಿ ಟೆಂಡರ್ ಪಡೆದಿದ್ದೆ ಒಂದಕ್ಕೆ, ಆದ್ರೆ ನಡೆಸುತ್ತಿರುವುದೇ ಮತ್ತೊಂದಾಗಿದೆ. ಈ ಬಸ್ ನಿಲ್ದಾಣದ ಕಟ್ಟದ ನಾಲ್ಕನೇ ಮಹಡಿಯಲ್ಲಿ ಪಬ್ ತೆರೆಯಲು ಅವಕಾಶ ನೀಡಲಾಗಿದೆ. ಕಳೆದ ವರ್ಷ 80 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಾಗಿತ್ತು. 12 ವರ್ಷಕ್ಕೆ ಬಿಎಂಟಿಸಿ ಅಧಿಕಾರಿಗಳು ಅಗ್ರಿಮೆಂಟ್ ಮಾಡಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬಿಜೆಪಿಯ ಪ್ರಭಾವಿ ಶಾಸಕರೊಬ್ಬರ ಸಂಬಂಧಿಗೆ ಸೇರಿದ ಬಾರ್ ಇದಾಗಿದೆ ಎಂದು ಹೇಳಲಾಗ್ತಿದೆ.
ಇದನ್ನೂ ವೀಕ್ಷಿಸಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಾಲೀಮು: ಕನಿಷ್ಠ 20 ಸೀಟ್ ಗೆಲ್ಲಲು ನಾಯಕರ ಕಸರತ್ತು