ಟೈಮ್ಸ್‌ನೌ-ಇಟಿಜಿ ಜಂಟಿ ಸಮೀಕ್ಷೆ ಪ್ರಕಾರ ಯಾರಿಗೆಷ್ಟು ಸ್ಥಾನ ? ರಾಜ್ಯದಲ್ಲಿ ಕಾಂಗ್ರೆಸ್‌ ಎಷ್ಟು ಸೀಟು ಗೆಲ್ಲಲಿದೆ ?

3 ನೇ ಬಾರಿಯೂ ಲೋಕಸಭೆಯಲ್ಲಿ ಮೋದಿ ಕಮಾಲ್
ಟೈಮ್ಸ್‌ನೌ-ಇಟಿಜಿ ಜಂಟಿ ಚುನಾವಣಾ ಪೂರ್ವ ಸಮೀಕ್ಷೆ
ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ 4-6ಸ್ಥಾನ ಎಂದು ಅಂದಾಜು 

First Published Mar 9, 2024, 12:53 PM IST | Last Updated Mar 9, 2024, 12:53 PM IST

ಟೈಮ್ಸ್ ನೌ-ಇಟಿಜಿ ಸಮೀಕ್ಷೆಯಲ್ಲೂ ಮೋದಿಗೆ ಬಹುಮತ  ದೊರೆತಿದೆ. ಬಿಜೆಪಿಗೆ 333 ರಿಂದ 363 ಸ್ಥಾನ ಎಂದು ಸರ್ವೆ ಹೇಳಿದೆ. ಈ ಮೂಲಕ ಮೂರನೇ ಬಾರಿಯೂ ಲೋಕಸಭೆಯಲ್ಲಿ ಮೋದಿ(Narendra Modi) ಕಮಾಲ್‌ ಮಾಡಲಿದ್ದಾರೆ ಎನ್ನಲಾಗ್ತಿದೆ. ಟೈಮ್ಸ್ ನೌ-ಇಟಿಜಿ ಸಮೀಕ್ಷೆಯಲ್ಲಿ(Times Now-ETG survey) ಮೋದಿಗೆ ಬಹುಮತ  ದೊರೆತಿದ್ದು, ಲೋಕಸಭೆ(Loksabhe) ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಮೋದಿಗೆ ಜೈ ಎನ್ನಲಾಗಿದೆ. ಟೈಮ್ಸ್‌ನೌ-ಇಟಿಜಿ ಜಂಟಿ ಚುನಾವಣಾ ಪೂರ್ವ ಸಮೀಕ್ಷೆ ಇದಾಗಿದೆ. ಬಿಜೆಪಿ 358-398 ಸ್ಥಾನ , ಕಾಂಗ್ರೆಸ್‌ 110-130 ಸ್ಥಾನ, YSRCP-21-22 ಸ್ಥಾನ, ಬಿಜೆಡಿ 10-11 ಸ್ಥಾನ, ಇತರರು 11-15 ಸ್ಥಾನಗಳಲ್ಲಿ ಗೆಲುವು ಎಂದು ಸಮೀಕ್ಷೆ ಹೇಳುತ್ತಿದೆ. ಕರ್ನಾಟಕದಲ್ಲಿ(Karnataka) ಮೈತ್ರಿಪಕ್ಷ 22-24 ಸ್ಥಾನ ಪಡೆಯುವ ನಿರೀಕ್ಷೆ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ 4-6ಸ್ಥಾನ ಎಂದು ಅಂದಾಜು ಮಾಡಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಕಾಂಗ್ರೆಸ್ ಸೀಟು ಹೆಚ್ಚಳವಾಗುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಮತ ಶೇ.10ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. 2019ರಲ್ಲಿ  ಕಾಂಗ್ರೆಸ್ 1 ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸಿತ್ತು.

ಇದನ್ನೂ ವೀಕ್ಷಿಸಿ:  Rameshwaram Cafe Blast: ಅದ್ಧೂರಿಯಾಗಿ ಪುನಾರಂಭಗೊಂಡ ದಿ ರಾಮೇಶ್ವರಂ ಕೆಫೆ..! ಬಾಂಬ್ ಸದ್ದು ಕೇಳಿದಲ್ಲೇ ಮಂತ್ರಘೋಷ..!