Rameshwaram Cafe Blast: ಅದ್ಧೂರಿಯಾಗಿ ಪುನಾರಂಭಗೊಂಡ ದಿ ರಾಮೇಶ್ವರಂ ಕೆಫೆ..! ಬಾಂಬ್ ಸದ್ದು ಕೇಳಿದಲ್ಲೇ ಮಂತ್ರಘೋಷ..!
ಬಾಂಬ್ ಸ್ಫೋಟವಾದ ಜಾಗದಲ್ಲಿ ಹೋಮ ಹವನ..!
ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು ರಾಮೇಶ್ವರಂ ಕೆಫೆ ಸ್ಫೋಟ..!
ಆತಂಕದಿಂದ ಹೊರ ಬಂದಿದ್ದು ಹೇಗೆ ಕೆಫೆ ಮಾಲೀಕರು..?
ರಾಜ್ಯವನ್ನೇ ಬೆಚ್ಚಿಬೀಳಿಸಿದ ಸ್ಫೋಟ ದಿ ರಾಮೇಶ್ವರಂ ಕೆಫೆ ಬ್ಲಾಸ್ಟ್. 10 ವರ್ಷಗಳ ನಂತರ ಬೆಂಗಳೂರು(Bengaluru) ಮತ್ತೊಂದು ಬಾಂಬ್ ಆಘಾತಕ್ಕೆ ಸಾಕ್ಷಿಯಾಗಿತ್ತು. ಬೆಂಗಳೂರಿನ ಖ್ಯಾತ ಕೆಫೆ ರಾಮೇಶ್ವರಂ(Rameswaram Cafe) ಭಯ ಗೂಡಾಗಿತ್ತು. ಶಿವರಾತ್ರಿಯ ಈ ದಿನದಂದು ರಾಮೇಶ್ವರಂ ಕೆಫೆ ಮತ್ತೆ ಓಪನ್ ಆಗಿದೆ. ತುಂಬಾ ಗ್ರಾಂಡ್ ಆಗಿಯೇ ಪುನಾರಂಭಗೊಂಡಿದೆ. ರಾಮೇಶ್ವರಂ ಕೆಫೆ, ಈ ಹೆಸರನ್ನ ಬೇರೆ ಊರಿನವರು ಈ ಹಿಂದೆ ಅದೆಷ್ಟು ಸಲ ಕೇಳಿದ್ರೋ ಗೊತ್ತಿಲ್ಲ. ಆದ್ರೆ ಬೆಂಗಳೂರಿಗರ ಪಾಲಿಗೆ ಇದು ಫೇಮಸ್ ಹೋಟೆಲ್. ನೋಡನೋಡುತ್ತಲೇ ಖ್ಯಾತಿಯ ಉತ್ತುಂಗಕ್ಕೇರಿದ್ದ ಆಹಾರ ಸಂಸ್ಥೆ ಇದು. ಮೊನ್ನೆ ತನಕ ತುಪ್ಪ ಸವರಿದ ದೋಸೆಯಿಂದ, ವಿಶಿಷ್ಟ ವಿಭಿನ್ನ ಖಾದ್ಯದಿಂದ ಹೆಸರು ಮಾಡಿದ್ದ ಹೋಟೆಲ್ ಇದು. ಬೆಂಗಳೂರಿನ ಫೇಮಸ್ ಮೆಜಸ್ಟಿಕ್ ಬಸ್ ಸ್ಟಾಂಡ್ ಇದ್ಯಲ್ಲಾ, ಅದನ್ನ ಬೆಂಗಳೂರಿನ ಹೃದಯಭಾಗ ಅಂತ ಕನ್ಸಿಡರ್ ಮಾಡಿದ್ರೆ, ಅಲ್ಲಿಂದ ಸುಮಾರು 20-21 ಕಿಲೋಮೀಟರ್ ದೂರದಲ್ಲಿರೋ ಹೋಟೆಲ್ ಇದು. ಭಯಾನಕ ಸ್ಫೋಟಕ್ಕೆ(Bomb Blast) ತುತ್ತಾಗಿ, ಛಿದ್ರವಾಗಿದ್ದ ಈ ಹೋಟೆಲ್, ಬೆಂಗಳೂರಿನ ಲ್ಯಾಂಡ್ಮಾರ್ಕುಗಳ ಪೈಕಿ ಒಂದು. ಆದ್ರೆ ಅದನ್ನ ನಾಶ ಮಾಡೋಕೆ ನಿರ್ಧರಿಸಿಕೊಂಡು ಬಂದುಬಿಟ್ಟಿದ್ದ ಒಬ್ಬ ದುಷ್ಕರ್ಮಿ.
ಇದನ್ನೂ ವೀಕ್ಷಿಸಿ: ಡಾ.ಮಂಜುನಾಥ್ ರಾಜಕೀಯಕ್ಕೆ ಬರ್ತಾರಾ? ಶಿವರಾತ್ರಿ ಕಾರ್ಯಕ್ರಮದಲ್ಲಿ ಬಿಜೆಪಿಗೆ ಆಹ್ವಾನ ನೀಡಿದ ವಿಜಯೇಂದ್ರ !