Asianet Suvarna News Asianet Suvarna News

ಸಿದ್ದು ಒಡ್ಡೋಲಗದಿಂದ ಸಿಡಿಯಿತು ತ್ರಿವಳಿ ಡಿಸಿಎಂ ಅಸ್ತ್ರ: ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಮಾಸ್ಟರ್‌ಪ್ಲಾನ್!

'ತ್ರಿವಳಿ ಡಿಸಿಎಂ' ಕಿಚ್ಚು  ಹೊತ್ತಿಸಿದ್ದೇಕೆ ಸಿಎಂ ಸಿದ್ದು ಅತ್ಯಾಪ್ತ ಸಚಿವ ಕೆ.ಎನ್ ರಾಜಣ್ಣ..? ಕನಕಪುರ ಬಂಡೆಗೆ ಮೂಗುದಾರ ಹಾಕಲು ಮುಂದಾಯ್ತಾ ಸಿದ್ದರಾಮಯ್ಯ ಬಣ..? 1+3 ಡಿಸಿಎಂ ಬೇಕೇಬೇಕು ಅಂತ ಪಟ್ಟು ಹಿಡಿದಿರೋದ್ರ ಹಿಂದಿನ ಅಸಲಿ ಗುಟ್ಟೇನು? 

'ತ್ರಿವಳಿ ಡಿಸಿಎಂ' ಕಿಚ್ಚು  ಹೊತ್ತಿಸಿದ್ದೇಕೆ ಸಿಎಂ ಸಿದ್ದು ಅತ್ಯಾಪ್ತ ಸಚಿವ ಕೆ.ಎನ್ ರಾಜಣ್ಣ..? ಕನಕಪುರ ಬಂಡೆಗೆ ಮೂಗುದಾರ ಹಾಕಲು ಮುಂದಾಯ್ತಾ ಸಿದ್ದರಾಮಯ್ಯ ಬಣ..? 1+3 ಡಿಸಿಎಂ ಬೇಕೇಬೇಕು ಅಂತ ಪಟ್ಟು ಹಿಡಿದಿರೋದ್ರ ಹಿಂದಿನ ಅಸಲಿ ಗುಟ್ಟೇನು? 3 ಡಿಸಿಎಂ ಪಟ್ಟದ ಹಿಂದೆ 100 ಲೆಕ್ಕಾಚಾರ.. ಇದು ಡಿಕೆಗೆ ದಿಗ್ಬಂಧನ ಹಾಕೋ ಪಕ್ಕಾ ಲೆಕ್ಕ.. ಡಿಸಿಎಂ ಬಾಂಬ್ ಸಿಡಿಸಿದ ರಾಜಣ್ಣ ಹಿಂದೆ ಗಟ್ಟಿಯಾಗಿ ನಿಂತಿದ್ಯಾ ಬಂಡೆ ವಿರೋಧಿ ಬಣ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, 'ತ್ರಿವಳಿ' ಡಿಸಿಎಂ, 'ಅವಳಿ' ಆಟ. ಹಾಗಾದ್ರೆ ತ್ರಿವಳಿ ಡಿಸಿಎಂ ಅಸ್ತ್ರದ ಹಿಂದಿರೋ ಹರಿಕಥೆ ಉರಿಕಥೆ ಗುಟ್ಟೇನು..? ಡಿಕೆಶಿಗೆ ಡಿಸಿಎಂ ದಿಗ್ಬಂಧನ ಹಾಕೋ ಸಿದ್ದು ಬಣದ ಪ್ರಯತ್ನ ಯಶಸ್ವಿಯಾಗುತ್ತಾ..? ಸಿದ್ದರಾಮಯ್ಯ ಸರ್ಕಾರಕ್ಕೆ ಒಬ್ಬನೇ ಡಿಸಿಎಂ ಸಾಕಾಗಲ್ಲ.

ಇನ್ನೂ ಮೂವರು ಡಿಸಿಎಂಗಳು ಬೇಕು ಅಂದಿದ್ದಾರೆ ಸಿದ್ದು ಆಪ್ತ ಮಂತ್ರಿ ಕೆ.ಎನ್ ರಾಜಣ್ಣ. ತ್ರಿವಳಿ ಡಿಸಿಎಂ ಅಸ್ತ್ರದ ಹಿಂದೆ ಅವಳಿ ಆಟದ ಗುಟ್ಟೊಂದು ಅಡಗಿದೆ. ಇದು ಡಿಕೆಶಿಗೆ ಡಿಸಿಎಂ ದಿಗ್ಬಂಧನ, ಹರಿಕಥೆ, ಉರಿಕಥೆಗೆ ಬ್ರೇಕ್ ಹಾಕೋ ಪ್ರಯತ್ನ. ಡಿಕೆ ಶಿವಕುಮಾರ್ ಅವ್ರಿಗೆ ಅಸಮಾಧಾನವಾಗೋ ಪ್ರಶ್ನೆಯೇ ಇಲ್ಲ, ನಾನು ಡಿಕೆಶಿ ವಿರುದ್ಧ ಇಲ್ಲ ಅಂತ ರಾಜಣ್ಣ ಹೇಳಿದ್ದಾರೆ. ಅಷ್ಟಕ್ಕೂ ತ್ರಿವಳಿ ಡಿಸಿಎಂ ನೇಮಕದ ಪ್ರಸ್ತಾಪ ಕಾಂಗ್ರೆಸ್ ಹೈಕಮಾಂಡ್ ಮುಂದೆ ಇದ್ಯಾ..? ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಓಟಕ್ಕೆ ಬ್ರೇಕ್ ಹಾಕಲು ತ್ರಿವಳಿ ಡಿಸಿಎಂ ಅಸ್ತ್ರ ಸಿದ್ದು ಬಣದಿಂದ ನುಗ್ಗಿ ಬಂದಿದೆ. ಹಾಗಾದ್ರೆ ಮೂವರು ಡಿಸಿಎಂಗಳನ್ನು ನೇಮಕ ಮಾಡುವ ಪ್ರಸ್ತಾಪ ಕಾಂಗ್ರೆಸ್ ಹೈಕಮಾಂಡ್ ಮುಂದೆ ಇದ್ಯಾ..? ಈ ಬಗ್ಗೆ ಹೈಕಮಾಂಡ್ ನಿಲುವು ಏನು..? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

Video Top Stories